Karnataka Tourism

Karnataka Tourism Tourism Places of Karnataka A land blessed with many fascinating worlds. Come embark upon a journey through Karnataka. And discover the best of all worlds.

Discover ageless monuments, world heritage sites, lush green forests, amazing wildlife, spectacular waterfalls, romantic hill stations, timeless temples, pristine beaches, exhilarating adventure sports and vibrant art & culture. And, as you traverse through the length and breadth of Karnataka, be spellbound by every facet of this amazing land.

02/05/2024

‎Follow the ನಮ್ಮ ಕನ್ನಡ ನಾಡು ( Namma Kannada Nadu) channel on WhatsApp:

23/04/2018

ಎಂತಹ ವಿಸ್ಮಯ ನೋಡಿ. ಇಂತಹ ರಹಸ್ಯಗಳನ್ನು ನೀವು ಎಲ್ಲಾದರೂ ಕೇಳಿದ್ದೀರಾ? ಇಲ್ಲಿದೆ ಒಂದು ವಿಚಿತ್ರ ಸಂಗತಿ. ನಂಬಲು ಕಷ್ಟ ಆದರೂ ಸತ್ಯ. ಹಿ....

28/03/2015

ಅರ್ಕಾವತಿ ನದಿ: ಅರ್ಕಾವತಿ ಭಾರತದ ನದಿಗಳಲ್ಲೊಂದು. ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟಗಳಲ್ಲಿ ಉಗಮಿಸುವ ಇದು ಕಾವೇರಿ ನದಿಯ ಉಪನದಿಯಾಗಿದೆ. ಕೋಲಾರ, ರಾಮನಗರ ಮತ್ತು ಬೆಂಗಳೂ

28/02/2015

Beluru is one of the most popular destinations in Karnataka. Located in the Hassan district, this temple town is 220km away from Bangalore. Set on the banks

'ಕುಮಾರ ಪರ್ವತ'' (ಕುಕ್ಕೆ ಸುಬ್ರಮಣ್ಯ)ದಕ್ಷಿಣ ಭಾರತದ ಅತ್ಯಂತ ಎತ್ತರದ ಗಿರಿಶೃಂಗ ''ಕುಮಾರ ಪರ್ವತ'' (ಕುಕ್ಕೆ ಸುಬ್ರಮಣ್ಯ) ಇದನ್ನು ಪುಷ್ಪಗಿರಿ...
18/10/2013

'ಕುಮಾರ ಪರ್ವತ'' (ಕುಕ್ಕೆ ಸುಬ್ರಮಣ್ಯ)

ದಕ್ಷಿಣ ಭಾರತದ ಅತ್ಯಂತ ಎತ್ತರದ ಗಿರಿಶೃಂಗ ''ಕುಮಾರ ಪರ್ವತ'' (ಕುಕ್ಕೆ ಸುಬ್ರಮಣ್ಯ) ಇದನ್ನು ಪುಷ್ಪಗಿರಿ ಎಂದು ಕರೆಯುತ್ತಾರೆ. ಈ ಕ್ಷೇತ್ರ. ಪೌರಾಣಿಕ. ಐತಿಹಾಸಿಕ ಮತ್ತು ಧಾರ್ಮಿಕ ಹಿನ್ನೆಲೆಯನ್ನು ಹೊಂದಿದೆ. ವಿಶ್ವದ ಅತಿ ದೊಡ್ಡ ನಾಗಗಳಾದ ಕಾಳಿಂಗ ಸರ್ಪಗಳ ಅರಣ್ಯ ಎಂದೆನಿಸಿಕೊಂಡಿದೆ. ಶಿವಸುತನಾದ ಕುಮಾರಸ್ವಾಮಿಗೆ ''ಸುಬ್ರಮಣ್ಯ''ಎಂಬ ಪರ್ಯಾಯ ನಾಮವೋ ಇದೆ. ಬ್ರಹ್ಮನ ಶಾಪದಿಂದ ಸುಬ್ರಮಣ್ಯನು ಭಯಂಕರವಾದ ವಿಷವುಳ್ಳ ಘಟ ಸರ್ಪವಾದಾಗ ತಾಯಿ ಪಾರ್ವತಿ ದೇವಿಯು. ಈ ಕ್ಷೇತ್ರದಲ್ಲಿ ನೊರೆಂಟು ಷಷ್ಠಿಗಳ ವ್ರತ ಹಾಗೂ ಉದ್ಯಾಪನೆ ಮಾಡಿ ವಿಷ್ಣು ಸ್ವರ್ಶದಿಂದ ಶಾಪ ವಿಮೋಚನೆಯಾಗುತ್ತದೆ. ಹಾಗಾಗಿ ಈ ಗಿರಿಯನ್ನು ಕುಮಾರ ಪರ್ವತ ಅಥವಾ ಕುಕ್ಕೆ ಸುಬ್ರಮಣ್ಯ ಎಂದು ಕರೆಯುತ್ತಾರೆ. ಮಾಹಾಭಾರತದ ಜನಮೇಜಯನ ಸರ್ಪಯಾಗದ ಸಂದರ್ಭದಲ್ಲಿ ಈ ಕ್ಷೇತ್ರ ತಕ್ಷಕ ಮತ್ತು ವಾಸುಕಿಯರ ತಪೋಭೂಮಿ ಆಗಿತ್ತು. ಈ ಎಲ್ಲಾ ಹಿನ್ನೆಲೆಯಲ್ಲಿ ಈ ಪವಿತ್ರ ಭೂಮಿ ನಾಗಾರಾಧನೆಯ ಅತಿ ಶ್ರೇಷ್ಠ ಪೂಜಾ ತಾಣವಾಗಿದೆ. ಈ ಪುಣ್ಯಭೂಮಿಯ ಲಕ್ಷಣಗಳನ್ನು ಅತಿ ಸೂಕ್ಷ್ಮವಾಗಿ ಗೂಗಲ್ ಅರ್ಥ್ ನಲ್ಲಿ ಪರಿವೀಕ್ಷಣೆ ಮಾಡುವಾಗ ಕಂಡ ಚಮತ್ಕಾರಿಕ ನಾಗರೊಪ ಛಾಯಾಚಿತ್ರಗಳನ್ನು ಇಲ್ಲಿ ತೋರಿಸಲಾಗಿದೆ.

ಕಾಂತೆಶ್ವರ ದೇವಾಲಯ - ಕಾಂತವಾರ ಜಗದ್ಗುರು ಶ್ರೀ ಮಧ್ವಚಾರ್ಯರು ಅಸಂಖ್ಯಾತ ಪವಾಡಗಳನ್ನು ತೋರಿಸಿದ ಸ್ತಳ ಕಾರ್ಕಳದ ಕಾಂತಾವರ ದೇವಾಲಯ ಇಲ್ಲಿನ ಶ್ರೀ...
24/09/2013

ಕಾಂತೆಶ್ವರ ದೇವಾಲಯ - ಕಾಂತವಾರ

ಜಗದ್ಗುರು ಶ್ರೀ ಮಧ್ವಚಾರ್ಯರು ಅಸಂಖ್ಯಾತ ಪವಾಡಗಳನ್ನು ತೋರಿಸಿದ ಸ್ತಳ ಕಾರ್ಕಳದ ಕಾಂತಾವರ ದೇವಾಲಯ ಇಲ್ಲಿನ ಶ್ರೀ ಮಹಾರುದ್ರ ದೇವರಿಗೆ ಕಾಂತೆಶ್ವರ ಎಂಬ ಹೆಸರಿದೆ. ಇಲ್ಲಿನ ವಿಶೇಷವೇನೆಂದರೆ ಇಲ್ಲಿನ ಶಿವ ಲಿಂಗದ ಬಣ್ಣವು ಮೂರು ಯಾಮಗಳ್ಳಲಿ ಬದಲಾಗುತ್ತದೆ. ಬೆಳಗ್ಗೆ ಚಿನ್ನದ ಬಣ್ಣದಲ್ಲೂ ಮಧ್ಯಾಹ್ನ ಬೆಳ್ಳಿಯ ಬಣ್ಣದಲ್ಲೂ ಮತ್ತು ಸಂಜೆ ಕಂಚಿನ ಬಣ್ಣದಲ್ಲೂ ಮಂಗಳಾರತಿ ಸಮಯದಲ್ಲಿ ಕಾಣುತ್ತದೆ. ಆಚಾರ್ಯರು ನಡೆದಾಡಿದ ಸ್ತಳ ಬಹಳ ಪವಿತ್ರ ಮತ್ತು ವಿಶೇಷ ಅನುಗ್ರಹ ಹೊಂದಿದೆ.

ಹೆಡತಲೆ ಶ್ರೀ ಲಕ್ಷ್ಮೀಕಾಂತ ಸ್ವಾಮಿ ದೇವಾಲಯಶ್ರೀಕಂಠನ ನೆಲೆವೀಡು ನಂಜನಗೂಡಿಗೆ ಸಮೀಪದಲ್ಲೇ ಇರುವ ಮತ್ತೊಂದು ಪುಣ್ಯಕ್ಷೇತ್ರ ಹೆಡತಲೆ. ನಂಜನಗೂಡಿನ...
16/09/2013

ಹೆಡತಲೆ ಶ್ರೀ ಲಕ್ಷ್ಮೀಕಾಂತ ಸ್ವಾಮಿ ದೇವಾಲಯ

ಶ್ರೀಕಂಠನ ನೆಲೆವೀಡು ನಂಜನಗೂಡಿಗೆ ಸಮೀಪದಲ್ಲೇ ಇರುವ ಮತ್ತೊಂದು ಪುಣ್ಯಕ್ಷೇತ್ರ ಹೆಡತಲೆ. ನಂಜನಗೂಡಿನಿಂದ ಚಾಮರಾಜನಗರಕ್ಕೆ ಹೋಗುವ ಮುಖ್ಯ ರಸ್ತೆಯಲ್ಲಿ ಸಾಗಿದರೆ ಹತ್ತನೆ ಮೈಲಿಗಲ್ಲಿನ ಬಳಿ ತಿರುಗಿದರೆ ಎರಡು ಕಿಲೋ ಮೀಟರು ದೂರದಲ್ಲಿ ಸಿಗುವುದೇ ಹೆಡತಲೆ.

ಈ ಊರಿಗೆ ಹೆಡೆತಲೆ ಎಂಬ ಹೆಸರು ಬಂದ ಬಗ್ಗೆ ಪುರಾಣದಲ್ಲಿ ಒಂದು ಕಥೆ ಇದೆಯಂತೆ. ಹಿಂದೆ ಈ ಕ್ಷೇತ್ರ ಕೌಂಡಿನ್ಯ ಮಹರ್ಷಿಗಳ ತಪೋಭೂಮಿಯಾಗಿತ್ತು. ಹೀಗಾಗಿ ಈ ಕ್ಷೇತ್ರಕ್ಕೆ ಕೌಂಡಿನ್ಯ ಕ್ಷೇತ್ರ ಎಂದೇ ಹೆಸರು ಬಂದಿತ್ತು. ಇಲ್ಲಿ ಋಷಿ ಮುನಿಗಳು ಯಜ್ಞ ಯಾಗಾದಿಗಳನ್ನು ಮಾಡುತ್ತಿದ್ದಾಗ ರಾಕ್ಷಸರು ಬಂದು ಅಡಚಣೆ ಉಂಟು ಮಾಡುತ್ತಿದ್ದರು. ರಾಕ್ಷಸರ ಕಾಟ ಸಹಿಸಲಾರದೆ ಋಷಿಮುನಿಗಳು ಶ್ರೀಮನ್ನಾರಾಯಣನ ಮೊರೆ ಹೋದರು. ತಮ್ಮನ್ನು ಕಾಪಾಡುವಂತೆ ಬೇಡಿಕೊಂಡರು. ಪ್ರಸನ್ನನಾದ ನಾರಾಯಣ ಭೂಲೋಕಕ್ಕೆ ಬಂದು ತನ್ನ ಸುದರ್ಶನ ಚಕ್ರದಿಂದ ರಾಕ್ಷಸರನ್ನು ಸಂಹಾರ ಮಾಡಿದ. ಈ ಸಂದರ್ಭದಲ್ಲಿ ರಾಕ್ಷಸನ ತಲೆಯ ಎಡಭಾಗವು ಈ ಗ್ರಾಮದಲ್ಲಿ ಬಂದು ಬಿತ್ತಂತೆ. ಎಡ ಭಾಗದ ತಲೆ ಬಂದು ಬಿದ್ದ ಊರು ಎಡತಲೆ ಎಂದೇ ಖ್ಯಾತವಾಯಿತು. ಕಾಲಾನಂತರದಲ್ಲಿ ಅಪ್ರಭ್ರಂಶವಾಗಿ ಹೆಡತಲೆಯಾಯಿತು ಎನ್ನುತ್ತಾರೆ ಊರ ಹಿರಿಯರು.

ಅದೇ ರೀತಿ ರಾಕ್ಷಸನ ಕಾಲಿನ ಭಾಗ ಹೋಗಿ ಮತ್ತೊಂದು ಊರಿನಲ್ಲಿ ಬಿತ್ತು. ರಾಕ್ಷಸನ ಆ ಕಾಲು ದೊಡ್ಡ ಮರ (ಹೆಮ್ಮರ)ದಂತೆ ಕಾಣುತ್ತಿದ್ದ ಕಾರಣ ಆ ಊರಿನ ಹೆಮ್ಮರಗಾಲು ಎಂಬ ಹೆಸರು ಬಂತು. ಈಗ ಅದು ಹೆಮ್ಮರಗಾಲವಾಗಿದೆ.

ಈ ಊರು ವಿಶಿಷ್ಟಾದ್ವೈತ ಸಿದ್ಧಾಂತ ಪ್ರತಿಪಾದಕರಾದ ಶ್ರೀರಂಗಪ್ರಿಯ ಸ್ವಾಮಿಗಳ ಜನ್ಮಸ್ಥಳವೂ ಹೌದು. ಈ ಪುರಾಣ ಪ್ರಸಿದ್ಧ ಸ್ಥಳದಲ್ಲಿ ಹೊಯ್ಸಳರು ಶ್ರೀಲಕ್ಷ್ಮೀಕಾಂತ ಸ್ವಾಮಿ ದೇವಾಲಯವನ್ನು ನಿರ್ಮಿಸಿದ್ದಾರೆ. ಮೂರು ಗೋಪುರ, ಮೂರು ಗರ್ಭಗುಡಿಯನ್ನು ಹೊಂದಿರುವ ಈ ದೇವಾಲಯ ತ್ರಿಕೂಟಾಚಲವಾಗಿ ಪ್ರಸಿದ್ಧಿ ಪಡೆದಿದೆ.

ಕ್ರಿಸ್ತಶಕ 1282ರಲ್ಲಿ ನಿರ್ಮಿಸಿದ್ದೆಂದು ಹೇಳಲಾಗುವ ಈ ದೇವಾಲಯ ಪೂರ್ವಾಭಿಮುಖವಾಗಿದೆ. ಆದರೆ ಒಂದು ಗರ್ಭಗೃಹದಲ್ಲಿರುವ ಶ್ರೀ ಲಕ್ಷ್ಮೀಕಾಂತಸ್ವಾಮಿ ಇಲ್ಲಿ ದಕ್ಷಿಣಾಭಿಮುಖನಾಗಿದ್ದಾನೆ. ಮತ್ತೊಂದು ಗರ್ಭಗೃಹದಲ್ಲಿ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಇದ್ದು ಈ ವಿಗ್ರಹ ಉತ್ತರಾಭಿಮುಖವಾಗಿದೆ. ಮೂರನೆಯ ಗರ್ಭಗೃಹದಲ್ಲಿ ಶ್ರೀ ವೇಣುಗೋಪಾಲಸ್ವಾಮಿ ಮೂರ್ತಿ ಇದೆ.

ಈ ಮೂರು ಗರ್ಭಗೃಹ ಹಾಗೂ ಶಿಲಾಮೂರ್ತಿಗಳು ಹೊಯ್ಸಳರ ವಾಸ್ತುಶಿಲ್ಪಕ್ಕೆ ಹಿಡಿದ ಕನ್ನಡಿಯಾಗಿವೆ. ಕಲಾಶ್ರೀಮಂತಿಕೆಯಿಂದ ಕೂಡಿರುವ ವಿಗ್ರಹಗಳ ಹಿಂದಿರುವ ಪ್ರಭಾವಳಿಯಲ್ಲಿ ದಶಾವತಾರದ ಕೆತ್ತನೆ ಇದೆ. ಹಜಾರದ ಮಧ್ಯ ಭಾಗದಲ್ಲಿ ನಿಂತರೆ ಮೂರೂ ದೇವರುಗಳ ದರ್ಶನವಾಗುವ ರೀತಿಯಲ್ಲಿ ದೇವಾಲಯ ನಿರ್ಮಿಸಲಾಗಿದೆ.

ಈಶಾನ್ಯ ಮೂಲೆಯಲ್ಲಿ ಆಂಡಾಳ್ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. ಶ್ರೀ ಲಕ್ಷ್ಮೀಕಾಂತಸ್ವಾಮಿಯು ಶಂಖ, ಚಕ್ರ, ಗದಾ, ಪದ್ಮಧಾರಿಯಾಗಿದ್ದು ಈ ವಿಗ್ರಹ ಮನಮೋಹಕವಾಗಿದೆ.

ಶ್ರೀಲಕ್ಷ್ಮೀನರಸಿಂಹಸ್ವಾಮಿ ತನ್ನ ಎಡತೊಡೆಯ ಮೇಲೆ ಶ್ರೀಮಹಾಲಕ್ಷ್ಮಿಯನ್ನು ಕೂರಿಸಿಕೊಂಡಿದ್ದು ನರಸಿಂಹಸ್ವಾಮಿ ಶಾಂತಸ್ವರೂಪಿಯಾಗಿದ್ದಾನೆ. ಇನ್ನು ಶ್ರೀ ವೇಣುಗೋಪಾಲ ಸ್ವಾಮಿ ಕೊಳಲು ನುಡಿಸುತ್ತಿದ್ದು ಪ್ರಭಾವಳಿಯಲ್ಲಿ ರುಕ್ಮಿಣಿ ಸತ್ಯಭಾಮೆ ಹೂಗ ಗೋವುಗಳನ್ನು ಶಿಲ್ಪಿ ಕಡೆದಿದ್ದಾನೆ. ಅತ್ಯಂತ ಪ್ರಾಚೀನವಾದ ಈ ದೇವಾಲಯ ನೋಡಲೇ ಬೇಕಾದ ಪುಣ್ಯಕ್ಷೇತ್ರ.

ಕೂಡ್ಲು ತೀರ್ಥNamma Kannada Naduಆಗುಂಬೆಯ ದಟ್ಟ ಕಾನನ ಪ್ರದೇಶದಲ್ಲಿ ಉಗಮಿಸುವ ಸೀತಾ ನದಿಯಿಂದ ಉಂಟಾಗಿರುವ ಅತಿ ರಮಣೀಯ ಪ್ರವಾಸಿ ತಾಣವೇ ಈ ಕೂಡ...
08/09/2013

ಕೂಡ್ಲು ತೀರ್ಥ

Namma Kannada Nadu

ಆಗುಂಬೆಯ ದಟ್ಟ ಕಾನನ ಪ್ರದೇಶದಲ್ಲಿ ಉಗಮಿಸುವ ಸೀತಾ ನದಿಯಿಂದ ಉಂಟಾಗಿರುವ ಅತಿ ರಮಣೀಯ ಪ್ರವಾಸಿ ತಾಣವೇ ಈ ಕೂಡ್ಲು ತೀರ್ಥ.

ಉಡುಪಿಯಿಂದ 42 ಕಿ.ಮೀ. ದೂರದಲ್ಲಿಯೂ, ಹೆಬ್ರಿಯಿಂದ ಸುಮಾರು 20 ಕಿ.ಮೀ. ದೂರದಲ್ಲಿರುವ 4 ಕಿ.ಮೀ. ದೂರ ರಾಜ್ಯದಲ್ಲೇ ಅತಿ ಹೆಚ್ಚು ಮಳೆ ಬೀಳುವ ಪ್ರದೇಶವೆಂದು ಖ್ಯಾತಿ ಪಡೆದಿರುವ ಆಗುಂಬೆಯ ದಟ್ಟ ಕಾನನದ ಕಾಲುದಾರಿಯಲ್ಲಿ ನಡೆದೇ ಸಾಗಬೇಕಾದ ಅನಿವಾರ್ಯ ಇರುವ ಕೂಡ್ಲು ತೀರ್ಥವು ಬಳವಳಿದು ಅರಸಿ ಬಂದ ಮನಕೆ ಚೆಲುವಿನಿಂದ ಮನಸೂರೆಗೊಳ್ಳುವಂತೆ ಮಾಡಿಬಿಡುತ್ತದೆ.

ದಟ್ಟ ಕಾನನದ ಹೆಬ್ಬಂಡೆಯನ್ನು ಸೀಳಿಕೊಂಡು ಸುಮಾರು 250 ಅಡಿ ಎತ್ತರದಿಂದ ಧುಮ್ಮಿಕ್ಕುವ ಆ ರಮಣೀಯತೆಯ ಅಪರಾವತಾರದಂತಹ ಕಂಪ ಸೂಸುತ್ತ ಭೋರ್ಗರೆಯುತ್ತ ಬೀಳುವ ದೃಶ್ಯ ನಿಜಕ್ಕೂ ನಡೆದು ಬಂದ ದಣಿವೆಲ್ಲವನ್ನೂ ಇಂಗಿಸಿಬಿಡುತ್ತದೆ. ನಿತ್ಯ ಹರಿದ್ವರ್ಣದ ಕಾನನವನ್ನು ನೆನಪಿಸುವ ದಟ್ಟ ಅರಣ್ಯ ಪ್ರದೇಶದಲ್ಲಿ ಸುಮಾರು ಒಂದು ಗಂಟೆಯ ನಡಿಗೆಯ ಪಯಣ ಚೇತೋಹಾರಿಯಾದದ್ದು. ಎತ್ತ ನೋಡಿದರೂ ಮುಗಿಲೆತ್ತರಕ್ಕೆ ಬೆಳೆದು ನಿಂತ, ಮುಂದಿನ ಹಾದಿಯೇ ಕಾಣಿಸದಷ್ಟು ಒತ್ತಾಗಿ ಬೆಳೆದು ನಿಂತ ವೃಕ್ಷ ರಾಶಿ, ಅಲ್ಲಲ್ಲಿ ಕಂಡೂ ಕಾಣದೆ ಸರಸರ ಸದ್ದು ಮಾಡುತ್ತ ಹರಿದಾಡುವ ಸರೀಸೃಪಗಳ ಸಪ್ಪಳ, ಕಾಡು ಪ್ರಾಣಿಗಳ ಕೂಗು, ಪಕ್ಷಿಗಳ ಕಲರವ, ದೂರದ ಸೀತಾ ನದಿಯ ಜಲಪಾತದ ಝಳು ಝಳು ಸದ್ದು ಹೀಗೆ ಎಲ್ಲವೂ ಪ್ರವಾಸಿಗರ ಪಯಣವನ್ನು ಆವಿಸ್ಮರಣೀಯಗೊಳಿಸುತ್ತದೆ.

ಗಗನದಿಂದ ಭುವಿಯತ್ತ ಒಮ್ಮೆಲೆಯೇ ಹೆಬ್ಬಂಡೆಗಳನ್ನು ಸೀಳಿಕೊಂಡು ದೊಪ್ಪೆಂದು ಧುಮ್ಮಿಕ್ಕುವ ಸೀತಾ ನದಿಯ ಕೂಡ್ಲು ತೀರ್ಥದ ಪರಿಸರ ನೋಡುಗರನ್ನು ಯಾವುದೇ ಒಂದು ಕಿನ್ನರ ಲೋಕಕ್ಕೆ ಕರೆದೊಯ್ಯುವಂತೆ ಮಾಡುತ್ತದೆ. ಜಲಪಾತದ ಒಂದು ಪಾರ್ಶ್ವದಲ್ಲಿ ಎಚ್ಚರಿಕೆಯಿಂದ ಝಳಕ ಮಾಡಲು ಅಡ್ಡಿಯಿಲ್ಲ. ನೆನಪಿರಲಿ, ಮಳೆಗಾಲದಲ್ಲಿ ಜಿಗಣೆಗಳ ಕಾಟ.

06/09/2013
Maharani College.
03/09/2013

Maharani College.

Briilant design of Chamundeshwari Temple at
02/09/2013

Briilant design of Chamundeshwari Temple at

Address

Old Town, Old Post Office Road
Challakere
577522

Alerts

Be the first to know and let us send you an email when Karnataka Tourism posts news and promotions. Your email address will not be used for any other purpose, and you can unsubscribe at any time.

Contact The Business

Send a message to Karnataka Tourism:

Share

Category