A4dable.in

A4dable.in An online store making New and Old Books affordable to every book maniac mainly for inclusive educat

ಉತ್ತರ ಕನ್ನಡ ಕಡೆ ಹೊರಟವರು ಈ 13 ತಾಣಗಳನ್ನು ಮನಸ್ಸಲ್ಲಿಟ್ಟುಕೊಳ್ಳಿ
27/01/2021

ಉತ್ತರ ಕನ್ನಡ ಕಡೆ ಹೊರಟವರು ಈ 13 ತಾಣಗಳನ್ನು ಮನಸ್ಸಲ್ಲಿಟ್ಟುಕೊಳ್ಳಿ

ಹಸಿರು ಕಾಡು, ನೀಲಿ ಸಮುದ್ರ, ರಭಸದಿಂದ ಹರಿಯುವ ಕಾಳಿ ನದಿ, ನಿಗೂಢವಾಗಿರುವ ದಟ್ಟಾರಣ್ಯ, ಧ್ಯಾನಾಸಕ್ತರಿಗೆ ಧಾರ್ಮಿಕ ಸ್ಥಳಗಳು, ಸಂಸ್ಕೃ...

16/01/2021

ಕಾಲೇಜಿನ ಪತ್ರಿಕೋದ್ಯಮ ಉಪನ್ಯಾಸಕ ಮಂಜುನಾಥ್ ಕಾಮತ್ ಸರ್ ಅವರ ಮದುವೆ ಆರತಕ್ಷತೆ ಹೋಗುವುದರ ಬಗ್ಗೆ ಕ್ಲಾಸಿನ ಬೆಸ್ಟ್ ಫ್ರೆಂಡ್ಸ್ ಗಳ ...

09/01/2021

Bengaluru to Karwar Train

ಪುಟ್ಟ ಮಗುವಿನ ಜತೆ ಪ್ರವಾಸ ಕಷ್ಟ ಅನ್ನುವುದು ಬಹುತೇಕ ಅಮ್ಮಂದಿರ ಮಾತು. ಆದರೆ ಹಿಪ್ಪೀ ರಾಣಿ ಅಲಿಯಾಸ್ ಶ್ರುತಿ ಯೋಚನೆ ಎಲ್ಲಕ್ಕಿಂತ ಭಿನ್ನ ಮತ್ತ...
06/12/2020

ಪುಟ್ಟ ಮಗುವಿನ ಜತೆ ಪ್ರವಾಸ ಕಷ್ಟ ಅನ್ನುವುದು ಬಹುತೇಕ ಅಮ್ಮಂದಿರ ಮಾತು. ಆದರೆ ಹಿಪ್ಪೀ ರಾಣಿ ಅಲಿಯಾಸ್ ಶ್ರುತಿ ಯೋಚನೆ ಎಲ್ಲಕ್ಕಿಂತ ಭಿನ್ನ ಮತ್ತು ವಿಶಿಷ್ಟ. ಮೂಲತಃ ಪ್ರವಾಸ ಪ್ರಿಯೆಯಾಗಿರುವ ಇವರು ಮಗುವಾದ ಮೇಲೆಯೂ ತನ್ನ ಪ್ರವಾಸ ಪ್ರೀತಿ ಬಿಟ್ಟಿಲ್ಲ. ಮಗಳು ಋತು ಹುಟ್ಟಿದ ಆರು ತಿಂಗಳಲ್ಲೇ ಮಗಳನ್ನೆತ್ತಿಕೊಂಡು ಪ್ರವಾಸ ಹೊರಟ ಶ್ರುತಿಯ ಜೀವನದ ಕುರಿತ ಲವಲವಿಕೆಯ ಬರಹ ಬರೆದಿದ್ದು ಎಂಜಿಎಂ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿನಿ ನವ್ಯಶ್ರೀ ಶೆಟ್ಟಿ.

ಪುಟ್ಟ ಮಗುವಿನ ಜತೆ ಪ್ರವಾಸ ಕಷ್ಟ ಅನ್ನುವುದು ಬಹುತೇಕ ಅಮ್ಮಂದಿರ ಮಾತು. ಆದರೆ ಹಿಪ್ಪೀ ರಾಣಿ ಅಲಿಯಾಸ್ ಶ್ರುತಿ ಯೋಚನೆ ಎಲ್ಲಕ್ಕಿಂತ ಭ....

ಸುಳ್ಳು ಹೇಳಿ ಅಮ್ಮನನ್ನು ಜಗತ್ತು ಸುತ್ತಿಸಿದ ಮಗ: ಗೀತಮ್ಮನ ಮಗ ಶರತ್ ಕೃಷ್ಣನ್ ಸ್ಫೂರ್ತಿಕತೆ
02/12/2020

ಸುಳ್ಳು ಹೇಳಿ ಅಮ್ಮನನ್ನು ಜಗತ್ತು ಸುತ್ತಿಸಿದ ಮಗ: ಗೀತಮ್ಮನ ಮಗ ಶರತ್ ಕೃಷ್ಣನ್ ಸ್ಫೂರ್ತಿಕತೆ

ಪ್ರತಿಯೊಬ್ಬರ ಅಮ್ಮನೂ ತನ್ನ ಮನೆ, ಸಂಸಾರವೆಂಬ ಬಾರ್ಡರ್ ನಿಂದ ಹೊರ ಬರೋಕೆ ಹಿಂಜರಿಯುತ್ತಾರೆ. ತಮ್ಮ ಆಸೆ, ಕನಸುಗಳನ್ನು ಮಕ್ಕಳಿಗಾಗಿ, ಕ...

ಹುಡುಗಿಯರಿಗೆ ಸ್ಫೂರ್ತಿಯಾಗುವ, ಪ್ರವಾಸಿಗರಿಗೆ ಬೆರಗು ಹುಟ್ಟಿಸುವ ಸ್ಫೂರ್ತಿಗಾಥೆಗೊತ್ತಿಲ್ಲದ ಊರಿನಲ್ಲಿ ರಾತ್ರಿ ಹತ್ತು ಗಂಟೆಗೆ ಬಸ್ಸಲ್ಲಿ ಬರು...
01/12/2020

ಹುಡುಗಿಯರಿಗೆ ಸ್ಫೂರ್ತಿಯಾಗುವ, ಪ್ರವಾಸಿಗರಿಗೆ ಬೆರಗು ಹುಟ್ಟಿಸುವ ಸ್ಫೂರ್ತಿಗಾಥೆ

ಗೊತ್ತಿಲ್ಲದ ಊರಿನಲ್ಲಿ ರಾತ್ರಿ ಹತ್ತು ಗಂಟೆಗೆ ಬಸ್ಸಲ್ಲಿ ಬರುವಾಗ ಸುಸ್ತಾಗಿದೆ, ತಲೆ ಸುತ್ತುತ್ತಿದೆ ಅಂತ ಹೇಳಿದ ಮಾತ್ರಕ್ಕೆ ಬಸ್ ಕಂಡಕ್ಟರ್ ಆಕೆಯನ್ನು ಬಸ್ ನಿಂದ ಇಳಿಸಿ ಅಲ್ಲಿಂದ ಭರ್ರನೆ ಮುಂದೆ ಹೋದರೆ ಆ ಹುಡುಗಿ ಏನು ಮಾಡಬೇಕು?

ಅಂಥಾ ಹೊತ್ತಲ್ಲಿ ತನಗೇನಾಯಿತು ಅಂತ ಸೋಲೋ ಟ್ರಾವೆಲರ್ ಚಂದನಾ ರಾವ್ ಬರೆದಿದ್ದಾರೆ. ರಾಜ್ಯ, ರಾಷ್ಟ್ರಗಳಲ್ಲಿ ಕಡಿಮೆ ಹಣದಲ್ಲಿ ಸೋಲೋ ಟ್ರಾವೆಲ್ ಮಾಡಿರುವ ಚಂದದ, ಆತಂಕದ, ಖುಷಿಯ ಅನೇಕ ಅನುಭವಗಳನ್ನು ಹೊಂದಿರುವ ಅವರು 1800 ರೂಪಾಯಿಯಲ್ಲಿ 10 ದಿನ ತಮಿಳುನಾಡು ಹೇಗೆ ಸುತ್ತಿದೆ ಎಂಬ ಕುತೂಹಲಕಾರಿ ಕಥನ ಬರೆದಿದ್ದಾರೆ. ಚಂದನಾ ಅವರನ್ನು ಕನ್ನಡದಲ್ಲಿ ಮೊದಲ ಬಾರಿಗೆ ಬರೆಸಿದ ಖುಷಿ ನಮ್ಮದು.

ಚಿನ್ನದ ನೆಲ ಕೋಲಾರದ ನಾರಾಯಣಪುರ ಎಂಬ ಸಣ್ಣ ಹಳ್ಳಿಯಿಂದ ಬಂದ ಹುಡುಗಿ. ಬೆಂಗಳೂರು ಕರ್ಮಭೂಮಿ. ಸ್ವಂತ ಕಂಪನಿ ತೆರೆದಿರುವ ಮಹತ್ವಾಕಾಂಕ.....

ನನ್ನ ಕನಸಿನ ಊರು ತೀರ್ಥಹಳ್ಳಿ'ತೀರ್ಥಹಳ್ಳಿ' ಹೆಸರು ಕೇಳಿದರೇನೇ  ತಂಪು ಬೀಸುತ್ತದೆ. ಸುತ್ತಾಡಲೇಬೇಕೆಂಬ ಹಠ ಎದ್ದಾಗ, ಎಲ್ಲಿಗೆ ಹೋಗೋದು ಎಂಬ ಸಂಶ...
18/11/2020

ನನ್ನ ಕನಸಿನ ಊರು ತೀರ್ಥಹಳ್ಳಿ

'ತೀರ್ಥಹಳ್ಳಿ' ಹೆಸರು ಕೇಳಿದರೇನೇ ತಂಪು ಬೀಸುತ್ತದೆ. ಸುತ್ತಾಡಲೇಬೇಕೆಂಬ ಹಠ ಎದ್ದಾಗ, ಎಲ್ಲಿಗೆ ಹೋಗೋದು ಎಂಬ ಸಂಶಯವಾದಾಗ ತೀರ್ಥಹಳ್ಳಿಗೆ ಬಂದು ಬಿಡುತ್ತೇನೆ. ಕಳೆದ ಬೇಸಿಗೆಯಲ್ಲಿ ಮೂರು ರಾತ್ರಿಗಳನ್ನು ಪರಶು ತೀರ್ಥದ ಬಳಿಯ ರಾಮಮಂಟಪದ ಕೆಳಗೆ ಚುಕ್ಕಿ ಎಣಿಸುತ್ತಾ ಮಲಗಿದ್ದೆ. ಹರಿಯುವ ತುಂಗೆಯಲ್ಲಿ ಉದ್ದಕ್ಕೆ, ಅರ್ಧ ಮುಳುಗುವಂತೆ ಮಲಗಿ ನೀರಿನ ತಂಪು ಹಾಗೂ ಬಿಸಿಲಿನ ಬೇಗೆಯ ಮಿಶ್ರಣದ ಖುಷಿ ಅನುಭವಿಸಿದ್ದೇನೆ. ಈ ಸಲದ ಮಳೆಗೆ ಆ ತೀರ್ಥ ಮಂಟಪ ಮುಳುಗಿದ್ದನ್ನು ಕಂಡು ಬೆರಗುಗೊಂಡಿದ್ದೇನೆ.

ಮುಂಜಾನೆ ಬೇಗ ಸಮೀಪದ ಬೆಟ್ಟವೇರಿ ಸೂರ್ಯೋದಯ ನೋಡಿದ್ದೇನೆ. ತುಂಗಾ ನದಿಯ ತೀರದಲ್ಲಿ ಸಂಗೀತ ಅಭ್ಯಾಸ ಮಾಡುವ ವಾದ್ಯದವರ ಧ್ವನಿಗೆ ಕರಗಿಹೋಗಿದ್ದೇನೆ. ಹಳೆಯ ಕಲ್ಲಿನ ಸೇತುವೆಯ ಮೂಲಕ ದಾಟುವ ಮಲ್ನಾಡ್ ಹುಡುಗಿಯರ ಗೆಜ್ಜೆಯ ಗಲ್ ಗಲ್ಲಿಗೆ ಸೋತಿದ್ದೇನೆ.
ಆದರೆ ತೀರ್ಥಹಳ್ಳಿಯ ನದಿ ದಂಡೆ ಮಾತ್ರ ತೀರಾ ಹೊಲಸು. ಚಂದದ ಊರಿಗೆ ಅದೊಂದು ಕಪ್ಪು ಚುಕ್ಕೆ. ದೂರದ ಗಂಗೆಯ ಶುದ್ದೀಕರಣ ಇನ್ನೂ ಆಗ್ಲೇ ಇಲ್ಲ ಎನ್ನುವ ಸುದ್ದಿಯನ್ನು ತುಂಗೆಯಲ್ಲಿ ಉಚ್ಚೆ ಹೊಯ್ದೇ ಮಾತಾಡುವ ಯುವಕರನ್ನು ಕಂಡಿದ್ದೇನೆ.
ಅದನ್ನು ಹೊರತುಪಡಿಸಿದರೆ ತೀರ್ಥಹಳ್ಳಿ ನನ್ನ ಕನಸಿನ ಊರು.

ಚಿತ್ರ, ಬರಹ: ಮಂಜುನಾಥ್ ಕಾಮತ್

ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯದಳು
14/11/2020

ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯದಳು

ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯಗಳು

13/11/2020

ನಯನ ಮನೋಹರ ಜೈನ ಬಸದಿ

ಆಗುಂಬೆ ಎಂಬ ವಿಸ್ಮಯಕರ್ನಾಟಕದ ಚಿರಾಪುಂಜಿ ಎಂದೇ ಕರೆಯಲ್ಪಡುವ ಆಗುಂಬೆಯ ತಿರುವುಗಳಲ್ಲಿ ಸಾಗಿದರೆ ಆಗುಂಬೆ ಮರೆಯುವುದು ಸಾಧ್ಯವೇ ಇಲ್ಲ. ಸ್ವಲ್ಪ ಹ...
12/11/2020

ಆಗುಂಬೆ ಎಂಬ ವಿಸ್ಮಯ

ಕರ್ನಾಟಕದ ಚಿರಾಪುಂಜಿ ಎಂದೇ ಕರೆಯಲ್ಪಡುವ ಆಗುಂಬೆಯ ತಿರುವುಗಳಲ್ಲಿ ಸಾಗಿದರೆ ಆಗುಂಬೆ ಮರೆಯುವುದು ಸಾಧ್ಯವೇ ಇಲ್ಲ. ಸ್ವಲ್ಪ ಹೊತ್ತು ಮೌನವಾಗಿ ಆಗುಂಬೆ ನೆತ್ತಿ ಮೇಲೆ ನಿಂತರೆ ಅದೇ ಒಂದು ಧ್ಯಾನ. ಆಗುಂಬೆಯ ಕಾಡು ಸದಾ ಒಂದೇ ಥರ ಇರುವುದಿಲ್ಲ. ಆಗುಂಬೆ ಎಂಬ ವಿಸ್ಮಯವನ್ನು ಮೂರು ಫೋಟೋಗಳಲ್ಲಿ ತೋರಿಸಿ ಈ ಆಗುಂಬೆಯನ್ನು ಮತ್ತಷ್ಟು ಕಾಡುವಂತೆ ಮಾಡಿದ್ದಾರೆ ಉಡುಪಿ ಎಂಜಿಎಂ ಕಾಲೇಜಿನ ಉಪನ್ಯಾಸಕ ಮಂಜುನಾಥ ಕಾಮತ್. ಅವರ ಪುಟ್ಟ ಬರಹ ಮತ್ತು ಫೋಟೋಗಳು ನಿಮ್ಮನ್ನು ಕಾಡದೇ ಬಿಡದು.

ಮೂರು ತಿಂಗಳ ಅಂತರ. ಅದೇ ಊರು. ಅದೇ ಜಾಗ.
ಜುಲೈ, ಆಗಸ್ಟ್, ಸೆಪ್ಟೆಂಬರ್ ತಿಂಗಳ ಒಂದೊಂದು ಚಿತ್ರ. ಆಗುಂಬೆಯದು. ಆಗುಂಬೆಯ ಬುಡ ಸೋಮೇಶ್ವರದಿಂದ ತೆಗೆದದ್ದು.
ಮೊದಲನೆಯ ಚಿತ್ರದಲ್ಲಿ ಮೂರನೇ ತಿರುವಲ್ಲಿ ಮಾತ್ರ ಮಂಜು. ಎರಡನೆಯದರಲ್ಲಿ ಏಳನೇ ತಿರುವಿನ ನಂತರ ಪೂರ್ತಿ ಮಂಜು ಆವರಿಸಿತ್ತು. ಮೂರನೇ ಚಿತ್ರದಲ್ಲಿ ಆಗುಂಬೆ ಎಂಬ ಘಟ್ಟವೇ ಇಲ್ಲವೇನೋ ಎಂಬಂತೆ 14 ತಿರುವುಗಳೂ ಮಾಯ!
ಎಲ್ಲವೂ ಮಂಜಿನಾಟ.

ಚಿತ್ರ, ಬರಹ: ಮಂಜುನಾಥ್ ಕಾಮತ್

ನಾಡಪ್ರಭುಗಳ ಸೊಸೆ ಮಹಾತ್ಯಾಗಿ ಲಕ್ಷ್ಮಮ್ಮ
07/11/2020

ನಾಡಪ್ರಭುಗಳ ಸೊಸೆ ಮಹಾತ್ಯಾಗಿ ಲಕ್ಷ್ಮಮ್ಮ

26/10/2020

ಆಫ್ರಿಕಾದಲ್ಲಿ ದಸರಾ ಆಚರಣೆಯ ಸಂಭ್ರಮ

Address

Bangalore

Alerts

Be the first to know and let us send you an email when A4dable.in posts news and promotions. Your email address will not be used for any other purpose, and you can unsubscribe at any time.

Contact The Business

Send a message to A4dable.in:

Share

Category