ಇಲ್ಲಿದೆ ಪಯಣ ಇಲ್ಲಿದೆ ದಾರಿ

ಇಲ್ಲಿದೆ ಪಯಣ ಇಲ್ಲಿದೆ ದಾರಿ This page is about Lifestyle, Philosophy, Travel and Tourism across India.

ಈ ಪುಟದ ಮುಖ್ಯ ಉದ್ದೇಶ ಭಾರತದ ಪ್ರತಿಯೊಂದು ಸ್ಥಳಗಳ ಕುರಿತು ಪ್ರವಾಸಿ ಮಾಹಿತಿಯನ್ನು ನೀಡುವುದಾಗಿದೆ. ಕನ್ನಡವನ್ನು ಉಳಿಸಿ, ಬೆಳೆಸಿಕೊಂಡು ಹೋಗುವ ದೃಷ್ಟಿಯಿಂದ ಈ ಪುಟವು ಕನ್ನಡದಲ್ಲಿ ರೂಪಗೊಂಡಿದೆ.

ಆಂಜನೇಯ ಮತ್ತು ಯಮನ ಯುದ್ಧದ ಬಗ್ಗೆ ನಿಮಗೆ ಗೊತ್ತೆ? ಇವರಿಬ್ಬರ ಮಧ್ಯೆ ಯುದ್ಧ ಆಗಿದ್ದು ಏಕೆ? ಗೆದ್ದವರು ಯಾರು?
17/03/2026

ಆಂಜನೇಯ ಮತ್ತು ಯಮನ ಯುದ್ಧದ ಬಗ್ಗೆ ನಿಮಗೆ ಗೊತ್ತೆ? ಇವರಿಬ್ಬರ ಮಧ್ಯೆ ಯುದ್ಧ ಆಗಿದ್ದು ಏಕೆ? ಗೆದ್ದವರು ಯಾರು?

A Kannada channel with all kinds of videos that makes you relax irrespective of your mood. You can find videos of Cooking recipes, Motivational and moral s...

ದತ್ತಾತ್ರೇಯರು ಯಾರು ಹಾಗೂ ಅವರಲ್ಲಿ ತ್ರಿಮೂರ್ತಿಗಳ ಅಂಶ ಬಂದಿದ್ದು ಹೇಗೆ? ನೀವು ಓದಲೇಬೇಕಾದ ಅದ್ಭುತ ಘಟನೆ
12/10/2025

ದತ್ತಾತ್ರೇಯರು ಯಾರು ಹಾಗೂ ಅವರಲ್ಲಿ ತ್ರಿಮೂರ್ತಿಗಳ ಅಂಶ ಬಂದಿದ್ದು ಹೇಗೆ? ನೀವು ಓದಲೇಬೇಕಾದ ಅದ್ಭುತ ಘಟನೆ

ಹೀಗೆ ಅತ್ರಿ ಮಹರ್ಷಿಗಳಿಗೆ ಬ್ರಹ್ಮನಿಂದ ಅತ್ರೇಯ, ಈಶ್ವರನಿಂದ ದುರ್ವಾಸ ಹಾಗೂ ನಾರಾಯಣನಿಂದ ದತ್ತಾತ್ರೇಯರು ಅನುಗ್ರಹಿತರಾಗಿದ್ದಾರ....

ಕೃಷ್ಣ ಪರಮಾತ್ಮನ ಹುಟ್ಟಿನ ಸಂದರ್ಭದಲ್ಲಿ ನಡೆದ ಘಟನೆಗಳನ್ನೊದಿದರೆ ನಿಮ್ಮ ಮನಸ್ಸೆ ರೋಮಾಂಚನದಿಂದ ಹೌಹಾರಬಹುದು..!
27/09/2025

ಕೃಷ್ಣ ಪರಮಾತ್ಮನ ಹುಟ್ಟಿನ ಸಂದರ್ಭದಲ್ಲಿ ನಡೆದ ಘಟನೆಗಳನ್ನೊದಿದರೆ ನಿಮ್ಮ ಮನಸ್ಸೆ ರೋಮಾಂಚನದಿಂದ ಹೌಹಾರಬಹುದು..!

ಕೃಷ್ಣ ಪರಮಾತ್ಮನ ಹುಟ್ಟಿನ ಸಂದರ್ಭವನ್ನು ಹಲವು ಕಾವ್ಯಗಳು, ಪುರಾಣಗಳಲ್ಲಿ ಅದ್ಭುತವಾಗಿ ವಿವರಿಸಲಾಗಿದೆ. ಆ ಹಿನ್ನೆಲೆಯಲ್ಲಿ ನಡೆದ ಘ....

ದೇಹ ತ್ಯಜಿಸಿದ ಆತ್ಮ ಪ್ರೇತದ ರೂಪದಲ್ಲಿ ತನ್ನ ಮುಂದಿನ ಪ್ರಯಾಣವನ್ನು ಹೇಗೆ ಮಾಡುತ್ತದೆ ಹಾಗೂ ಆ ಪ್ರಯಾಣದಲ್ಲಿ ಅದು ಎದುರಿಸುವ ಹಲವು ನಗರಗಳು ಯಾವ...
21/09/2025

ದೇಹ ತ್ಯಜಿಸಿದ ಆತ್ಮ ಪ್ರೇತದ ರೂಪದಲ್ಲಿ ತನ್ನ ಮುಂದಿನ ಪ್ರಯಾಣವನ್ನು ಹೇಗೆ ಮಾಡುತ್ತದೆ ಹಾಗೂ ಆ ಪ್ರಯಾಣದಲ್ಲಿ ಅದು ಎದುರಿಸುವ ಹಲವು ನಗರಗಳು ಯಾವುವು ಹಾಗೂ ಪ್ರತಿ ಸಂದರ್ಭಗಳಲ್ಲಿ ಅದು ಪಡುವ ಅವಸ್ಥೆ ಏನು ?

ದೇಹ ತ್ಯಜಿಸಿದ ಆತ್ಮ ಪ್ರೇತದ ರೂಪದಲ್ಲಿ ತನ್ನ ಮುಂದಿನ ಪ್ರಯಾಣವನ್ನು ಹೇಗೆ ಮಾಡುತ್ತದೆ ಹಾಗೂ ಆ ಪ್ರಯಾಣದಲ್ಲಿ ಅದು ಎದುರಿಸುವ ಹಲವು .....

ಪ್ರತಿಯೊಬ್ಬರೂ ಓದಲೇಬೇಕಾದ ಲೇಖನ ಅನಿಸುತ್ತದೆ. ಅಮಲು ಜೀವನವನ್ನೇ ಕಮರಿ ಹೋಗದಂತೆ ಮಾಡಲಿ….ಮೊದಲೇ ಎಚ್ಚುತ್ತುಕೊಳ್ಳಿ
15/12/2024

ಪ್ರತಿಯೊಬ್ಬರೂ ಓದಲೇಬೇಕಾದ ಲೇಖನ ಅನಿಸುತ್ತದೆ.
ಅಮಲು ಜೀವನವನ್ನೇ ಕಮರಿ ಹೋಗದಂತೆ ಮಾಡಲಿ….ಮೊದಲೇ ಎಚ್ಚುತ್ತುಕೊಳ್ಳಿ

ಅಮಲು ಜೀವನವನ್ನೇ ಕಮರಿ ಹೋಗದಂತೆ ಮಾಡಲಿ ಎಂದು ಹೇಳುತ್ತ ಪ್ರಾರಂಭಿಸುತ್ತಿರುವೆ...ಇಂದು ಅಂಗೈಯಲ್ಲೇ ಪ್ರಪಂಚವಿದೆ...ಏನು ಬೇಕೋ ಥಟ್ ಅಂತ...

ಆ ಪರಮ ದಯಾಳು ಕೃಷ್ಣ ದ್ರೌಪದಿಗೆ ಹೇಗೆ ಅಣ್ಣನಾಗಿ ಮಾನ ಕಾಪಾಡಿದ ಎಂಬುದು ನಿಮಗೆಲ್ಲ ಗೊತ್ತೇ ಇದೆ. ಆದರೆ ಹಿರಣ್ಮಯಿ ಎಂಬ ಭಕ್ತೆಯ ಕಣ್ಣೀರು ಒರೆಸಿ...
23/08/2024

ಆ ಪರಮ ದಯಾಳು ಕೃಷ್ಣ ದ್ರೌಪದಿಗೆ ಹೇಗೆ ಅಣ್ಣನಾಗಿ ಮಾನ ಕಾಪಾಡಿದ ಎಂಬುದು ನಿಮಗೆಲ್ಲ ಗೊತ್ತೇ ಇದೆ. ಆದರೆ ಹಿರಣ್ಮಯಿ ಎಂಬ ಭಕ್ತೆಯ ಕಣ್ಣೀರು ಒರೆಸಿದ್ದು ಹೇಗೆ ಗೊತ್ತೇ? ಈ ಕಥೆ ಆಧ್ಯಾತ್ಮಿಕ ಕಥೆ ಕೇಳಿ.

A Kannada channel with all kinds of videos that makes you relax irrespective of your mood. You can find videos of Cooking recipes, Motivational and moral s...

ಇಲ್ಲಿದೆ ಪಯಣ ಇಲ್ಲಿದೆ ದಾರಿ....ಇಲ್ಲಿ ಯಾರಿಗೆ ಯಾರೂ ಇಲ್ಲಾ..ಮುನ್ನಡೆಯುವ ಧೈರ್ಯ ಇದ್ರೆ ಸಾಕಲ್ಲ...ಒಂದು ಅತಿ ಚಿಕ್ಕ ಹಾಡು
20/04/2024

ಇಲ್ಲಿದೆ ಪಯಣ ಇಲ್ಲಿದೆ ದಾರಿ....ಇಲ್ಲಿ ಯಾರಿಗೆ ಯಾರೂ ಇಲ್ಲಾ..ಮುನ್ನಡೆಯುವ ಧೈರ್ಯ ಇದ್ರೆ ಸಾಕಲ್ಲ...ಒಂದು ಅತಿ ಚಿಕ್ಕ ಹಾಡು

A Kannada channel with all kinds of videos that makes you relax irrespective of your mood. You can find videos of Cooking recipes, Motivational and moral s...

ಮೋಕ್ಷ ಹಾಗೂ ಸಿದ್ಧಿ ಎರಡೂ ಲಭಿಸುವ ಕರ್ನಾಟಕದ ಏಕೈಕ ಕ್ಷೇತ್ರವಿದು! ಇದರ ಹಿಂದಿರುವ ಕಾರಣವೇನು ಎಂದು ತಿಳಿಯೋಣವೆ?
11/11/2021

ಮೋಕ್ಷ ಹಾಗೂ ಸಿದ್ಧಿ ಎರಡೂ ಲಭಿಸುವ ಕರ್ನಾಟಕದ ಏಕೈಕ ಕ್ಷೇತ್ರವಿದು! ಇದರ ಹಿಂದಿರುವ ಕಾರಣವೇನು ಎಂದು ತಿಳಿಯೋಣವೆ?

A Kannada channel with all kinds of videos that makes you relax irrespective of your mood. You can find videos of Cooking recipes, Motivational and moral s...

08/11/2021

ಮಿತ್ರರೆ,

ಶರೀರ ಸದಾ ಸದೃಢವಾಗಿರುವಂತೆ ಅದರ ಆರೋಗ್ಯ ಕಾಪಾಡಿಕೊಳ್ಳುವುದು ಎಷ್ಟು ಮುಖ್ಯವೋ ಮನಸ್ಸಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅಷ್ಟೇ ಮುಖ್ಯ. ಮನುಷ್ಯ ಶಾರೀರಿಕವಾಗಿ ಹಾಗೂ ಮಾನಸಿಕವಾಗಿ ಪ್ರಫುಲ್ಲಿತನಾದಾಗ, ಜೀವನ ಎಂಬುದು ನೆಮ್ಮದಿ ಹಾಗೂ ಆನಂದಗಳ ನಾವೆಯಾದಂತಾಗುತ್ತದೆ, ಆಗ ಇನ್ನೇನಿದ್ದರೂ ಆ ನಾವೆಯಲ್ಲಿ ಕುಳಿತು ಯಾವ ಕೊರತೆ ಹಾಗೂ ದೂರುಗಳಿಲ್ಲದೆ ನಮ್ಮ ಪ್ರಯಾಣವನ್ನು ಮುಗಿಸುವುದಷ್ಟೆ ಆಗಿದೆ. ಹಾಗಾಗಿ, ಈ ಪಯಣದಲ್ಲಿ ದೇಹದ ಆರೋಗ್ಯ ಕಾಪಾಡಿಕೊಂಡಂತೆ ಮನಸ್ಸಿನ ಆರೋಗ್ಯವನ್ನೂ ವೃದ್ಧಿಸಿ ಕಾಪಾಡಿಕೊಂಡು ಹೋಗಬೇಕಾದ ಅತೀವ ಅಗತ್ಯವಿದೆ. ಕೆಲವರಿಗೆ ಪ್ರೇರಣಾತ್ಮಕ ಕಥೆಗಳಿಂದ ಮನಸ್ಸು ಪುಳಕಿತಗೊಂಡರೆ, ಇನ್ನೂ ಕೆಲವರಿಗೆ ಕುತೂಹಲಕರ ಸಂಗತಿಗಳನ್ನು ಕೇಳಬೇಕೆಂಬ ಆಸೆ, ಹೊಸ ಹೊಸ ಸ್ಥಳಗಳಿಗೆ ಪ್ರವಾಸ ಮಾಡುವ ಹಂಬಲ. ಆಧ್ಯಾತ್ಮಿಕ ವಿಚಾರಗಳಿಂದಲೂ ಪ್ರಭಾವಿತಗೊಳ್ಳುವ ಜನರು ಸಹ ಅನೇಕರಿದ್ದಾರೆ.

ಮೇಲಿನ ಈ ಎಲ್ಲ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಮಾನವ ಕಲ್ಯಾಣವನ್ನೇ ಪ್ರಥಮ ಆದ್ಯತೆಯನ್ನಾಗಿಸಿ ನಾವು ಈಗ, Just Relax Aagi (ಜಸ್ಟ್ ರಿಲ್ಯಾಕ್ಸ್ ಆಗಿ) ಯುಟ್ಯೂಬ್ ವಾಹಿನಿಯನ್ನು ಹೊರತಂದಿದ್ದೇವೆ. ಶಾರೀರಿಕ ಆರೋಗ್ಯದೊಂದಿಗೆ ನೀವು ಮಾನಸಿಕವಾಗಿಯೂ ಉತ್ತಮವಾದ ವಿಚಾರ-ವಿಷಯಗಳನ್ನು ತಿಳಿಯುವ ಮೂಲಕ ಹೆಚ್ಚಿನ ಜ್ಞಾನಾರ್ಜನೆ ಮಾಡಿಕೊಳ್ಳಬೇಕೆಂಬ ಉದ್ದೇಶ ನಮ್ಮದು. ಮುಂದಿನ ದಿನಗಳಲ್ಲಿ ಇದರಲ್ಲಿ ನಮ್ಮ ಸನಾತನದ ಎಲ್ಲ ವಿಷಯ-ವಿಚಾರಗಳನ್ನು ಅಧ್ಯಯನದ ಮೂಲಕ ಸಂಗ್ರಹಿಸಿ ನೀಡಬೇಕೆಂಬ ಉದ್ದೇಶವೂ ಇದೆ. ಇದಕ್ಕಾಗಿಯೇ ಫೇಸ್ ಬುಕ್ ಪುಟವೊಂದನ್ನು ಸಹ ಸೃಷ್ಟಿಸಲಾಗಿದೆ. ಸಾಧ್ಯವಾದಷ್ಟು ಈ ಪುಟದಲ್ಲಿ ನಮ್ಮ ಸನಾತನ ಸಂಸ್ಕೃತಿಯ ಹಲವು ಕುತೂಹಲಕರ ಸಂಗತಿಗಳನ್ನು ಪ್ರಕಟಿಸಲಿದ್ದೇವೆ. ಈ ಚಾನಲ್ ಹಾಗೂ ಪುಟಕ್ಕೆ ಚಂದಾದಾರರಾಗುವ ಮೂಲಕ ನಮ್ಮ ಈ ಪ್ರಾಮಾಣಿಕ ಪ್ರಯತ್ನವನ್ನು ನೀವೆಲ್ಲರೂ ಬೆಂಬಲಿಸಬೇಕೆಂದು ಮನಃ ಪೂರ್ವಕ ಕೇಳಿಕೊಳ್ಳುತ್ತಿದ್ದೇವೆ.

ಯುಟ್ಯೂಬ್ ವಾಹಿನಿ
https://youtube.com/channel/UC5B0e40o2pR9FnaeJElgxUQ

ಫೇಸ್ ಬುಕ್ ಪುಟ್
https://www.facebook.com/Just-Relax-Aagi-108228118335927

ಧನ್ಯವಾದಗಳೊಂದಿಗೆ,

Motivational, Spiritual, Cookery, Humor and Knowledge

ಗುಳಿ ಗುಳಿ ಶಂಕರ....ನೀರಿನ ಚಿಲುಮೆ ನಿರಂತರ !ಕರ್ಮ ಭೂಮಿ, ಆಧ್ಯಾತ್ಮಿಕ ಬೀಡು ಎಂದೆಲ್ಲ ಪ್ರಸಿದ್ಧಿಯಾದ ಭಾರತ ದೇಶದಲ್ಲಿ, ಸಾಕಷ್ಟು ಸಂಖ್ಯೆಯಲ್ಲ...
26/12/2020

ಗುಳಿ ಗುಳಿ ಶಂಕರ....ನೀರಿನ ಚಿಲುಮೆ ನಿರಂತರ !

ಕರ್ಮ ಭೂಮಿ, ಆಧ್ಯಾತ್ಮಿಕ ಬೀಡು ಎಂದೆಲ್ಲ ಪ್ರಸಿದ್ಧಿಯಾದ ಭಾರತ ದೇಶದಲ್ಲಿ, ಸಾಕಷ್ಟು ಸಂಖ್ಯೆಯಲ್ಲಿ ಪವಾಡಮಯ ಸ್ಥಳಗಳಿವೆ. ಇದೇ ರೀತಿ ನಮ್ಮ ಕರ್ನಾಟಕದಲ್ಲೂ ಹಲವಾರು ವಿಶೇಷವಾದ ಸ್ಥಳಗಳಿದ್ದು ಎಲ್ಲರಿಗೂ ಆ ಕುರಿತು ತಿಳಿದಿಲ್ಲ. ಈ ನಿಟ್ಟಿನಲ್ಲಿ ನಮ್ಮ ನಾಡಿನ ವಿಶೇಷತೆ, ದೇವಾಲಯಗಳು, ಪ್ರಕೃತಿ ಸೌಂದರ್ಯ, ವೈವಿಧ್ಯಮಯ ಸಂಸ್ಕೃತಿಯನ್ನು ಎಲ್ಲ ಕನ್ನಡಿಗರಿಗೂ ತಿಳಿಸುವ ಉದ್ದೇಶವನ್ನು ಈ ಫೇಸ್ ಬುಕ್ ಪುಟವು ಹೊಂದಿದ್ದು ನಮ್ಮ ಸಾಮರ್ಥ್ಯಕ್ಕನುಸಾರವಾಗಿ ನಮ್ಮ ಅಳಿಲು ಸೇವೆ ಮಾಡುತ್ತಿದ್ದೇವೆ.

ಗುಳಿ ಗುಳಿ ಶಂಕರ ಎಂಬ ವಿಶೇಷವಾದ ಶಿವ ಮಹಿಮೆಯ ಸ್ಥಳವು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಗುಬ್ಬಿಗ ಗ್ರಾಮ ಎಂಬಲ್ಲಿ ಸ್ಥಿತವಿದೆ. ಶಿವಮೊಗ್ಗಕ್ಕೆ ತಲುಪಲು ಕರ್ನಾಟಕ ಬಹುತೇಕ ಎಲ್ಲ ಪ್ರಮುಖ ಜಿಲ್ಲೆಗಳಿಂದ ಬಸ್ಸುಗಳ ಔಲಭ್ಯವಿದ್ದು ಶಿವಮೊಗ್ಗದಿಂದ ಹೊಸನಗರಕ್ಕೆ ತಲುಪಲು ಬಸ್ಸುಗಳು ದೊರೆಯುತ್ತವೆ. ಇನ್ನೂ ಗುಳಿ ಗುಳಿ ಶಂಕರವು ಶಿವಮೊಗ್ಗದಿಂದ ಹೊಸನಗರ ಮಾರ್ಗವಾಗಿ ಸಾಗುವ ದಾರಿಯಲ್ಲಿ ಸುಮಾರು 40 ಕಿ.ಮೀ ಗಳಷ್ಟು ಅಂತರದಲ್ಲಿ ಗುಬ್ಬಿಗ ಗ್ರಾಮ ತಲುಪುವ ಮುಂಚೆಯೆ ಸಿಗುತ್ತದೆ.

ಗುಳಿ ಗುಳಿ ಶಂಕರ ಮೂಲತಃ ಒಂದು ಹೊಂಡ/ಕಲ್ಯಾಣಿ ಹಾಗೂ ಇಲ್ಲಿ ಚಿಕ್ಕ ದೇವಸ್ಥಾನವೂ ಇದೆ. ಇದನ್ನು ಜಟಾತೀರ್ಥ ಎಂತಲೂ ಸಹ ಕರೆಯಲಾಗುತ್ತದೆ.

ಐತಿಹ್ಯ : ಈ ಸ್ಥಳವು ಕೆಲ ಐತಿಹ್ಯಗಳನ್ನು ಹೊಂದಿದೆ. ಒಂದು ಪ್ರಮುಖ ಸ್ಥಳ ಪುರಾಣ ಎಂದರೆ, ಹಿಂದೆ ದ್ವಾಪರ ಯುಗಕ್ಕೂ ಮುಂಚೆ ಶಿವನು ಪಾರ್ವತಿ ದೇವಿಯೊಂದಿಗೆ ಈ ಸ್ಥಳದಲ್ಲಿ ವಿಹರಿಸುತ್ತಿರುವಾಗ ಪಾರ್ವತಿಗೆ ನೀರಿನ ದಾಹ ಉಂಟಾಯಿತು. ಅದನ್ನು ಪೂರೈಸಲೆಂದು ಶಿವನು ಗಂಗೆಯನ್ನು ಆಹ್ವಾನಿಸಿದಾಗ ಗಂಗೆಯೂ ರಭಸದಿಂದ ಚಿಮ್ಮಿದಳಂತೆ. ಇದರಿಂದ ಪ್ರಸನ್ನನಾದ ಶಿವನು ಗಂಗೆಯನ್ನು ಅಲ್ಲಿ ನೆಲಸಲು ಕೇಳಿದಾಗ ಗಂಗೆಯು ಅದಕ್ಕೆ ನಿರಾಕರಿಸಿದಳಂತೆ. ಕೋಪಗೊಂಡ ಶಿವನು ಗಂಗೆಯನ್ನು ತನ್ನ ಜಟೆಯಲ್ಲಿ ಹಿಡಿದು ಇಲ್ಲಿ ನೆಲೆಸುವಂತೆ ಮಾಡಿದ ಎನ್ನಲಾಗುತ್ತದೆ.

ವಿಶೇಷತೆ 1 : ಇಲ್ಲಿ ಸುತ್ತ-ಮುತ್ತ ಯಾವುದೇ ರೀತಿಯ ನೀರಿನ ಮೂಲಗಳಿಲ್ಲ. ಆದಾಗ್ಯೂ ಇಲ್ಲಿರುವ ಹೊಂಡದಲ್ಲಿ ನೀರಿನ ಚಿಲುಮೆ ಸಕ್ರಿಯವಾಗಿರುವುದು ಅಚ್ಚರಿ ಮೂಡಿಸುತ್ತದೆ. ಇನ್ನೊಂದು ವಿಚಾರವೆಂದರೆ ಇಲ್ಲಿನ ನೀರನ್ನು ವೈಜ್ಞಾನಿಕವಾಗಿ ಪರೀಕ್ಷಿಸಲಾಗಿದ್ದು ಅದರ ಫಲಿತಾಂಶ ಅಚ್ಚರಿ ಮೂಡಿಸುವಂತಿದೆ. ಈ ನೀರಿನಲ್ಲಿ ಕುಡಿಯುವ ನೀರಿನ ಎಲ್ಲ ಅರ್ಹತೆಗಳಿದ್ದು ಅದಕ್ಕಿಂತಲೂ ಹೆಚ್ಚೆಂಬಂತೆ ಕೆಲ ವಿಶೇಷವಾದ ಆರೋಗ್ಯಕರ ಖನಿಜಾಂಶಗಳಿವೆ ಎಂದು ಹೇಳಲಾಗಿದೆ. ಹಾಗಾಗಿ ಆರೋಗ್ಯದ ಅದರಲ್ಲೂ ವಿಶೇಷವಾಗಿ ಚರ್ಮದ ಹಲವು ಕಾಯಿಲೆಗಳು ಈ ನೀರನ್ನು ಸೇವಿಸಿ ಹೋಗಿಸಿಕೊಂಡ ಅನೇಕ ಭಕ್ತರ ಉದಾಹರಣೆಗಳಿವೆ.

ವಿಶೇಷತೆ 2 : ಇಲ್ಲಿನ ದೇವಸ್ಥಾನದಲ್ಲಿ ಭಕ್ತರಿಗೆ ೨೦ರೂ ಗೆ ಒಂದು ಬಿಲ್ವದಳವನ್ನು ರಸೀದಿ ಸಮೇತ ನೀಡುತ್ತಾರೆ. ಯಾರು ತಮ್ಮ ಮನದ ಬಯಕೆಯನ್ನು ಆ ಶಿವನಲ್ಲಿ ಅರುಹಿ ನೈಜವಾದ ಭಕ್ತಿ ಹಾಗೂ ಅತ್ಯಂತ ನಂಬಿಕೆಯಿಂದ ತಾವು ಪಡೆದ ಬಿಲ್ವಪತ್ರೆಯನ್ನು ಈ ಹೊಂಡದಲ್ಲಿ ಹಾಕುವರೋ ಅದು ನೆರವೇರಬೇಕೆಂದಿದ್ದಲ್ಲಿ ಆ ಬಿಲ್ವಪತ್ರೆಯು ಹೊಂಡ ನೀರಿನಲ್ಲಿ ಮುಳುಗಿ ಅವರ ಭಕ್ತಿ-ಭಾವ, ನಂಬಿಕೆಗೆ ತಕ್ಕಂತೆ ಮತ್ತೆ ಮೇಲೆ ಏರಿ ಬರುವುದನ್ನು ಕಾಣಬಹುದು.

ಈ ಹೊಂಡದಲ್ಲಿನ ನೀರು ವರ್ಷದ ಎಲ್ಲಾ ಕಾಲದಲ್ಲೂ ಜಿನುಗುತ್ತಲೇ ಇರುತ್ತದೆ. ಇದರ ತಳದಲ್ಲಿ ನೀರಿನ ಒತ್ತಡ ಹೇಗಿದೆ ಎಂದರೆ ಇದರಲ್ಲಿರುವ ಪಾಚಿಯ ಗಿಡಗಳು ನೇರವಾಗಿ ಕಂಬಗಳಂತೆ ಸೆಟೆದು ನಿಂತಿರುವುದನ್ನು ಕಾಣಬಹುದು ಮತ್ತು ಗುಳ್ಳಿ ಗುಳ್ಳಿಗಳು ಬರುತ್ತಲೇ ಇರುತ್ತವೆ. ಹಾಗಾಗಿಯೇ ಇದನ್ನು ಗುಳಿ ಗುಳಿ ಶಂಕರ ಎಂದು ಕರೆಯಲಾಗಿದೆ.

ವೈಜ್ಞಾನಿಕವಾಗಿ ಇದಕ್ಕೆ ಏನೇನೋ ಕಾರಣಗಳಿವೆಯಾದರೂ ಅನಾದಿ ಕಾಲದಿಂದಲೂ ದೈವತ್ವವನ್ನು ನಂಬಿಕೊಂಡ ಬಂದ ಜನರಿಗೆ ಇದೊಂದು ಶಿವನ ಇರುವಿಕೆಯ ಒಂದು ಸಂಕೇತವಾಗಿಯೇ ಮನದಲ್ಲಿ ಉಳಿದುಕೊಳ್ಳುತ್ತದೆ.

ಕೇಂದ್ರ ಸರ್ಕಾರದಿಂದ ನಡೆಸಲಾಗುವ ಸ್ವಚ್ಛ ಸರ್ವೇಕ್ಷಣೆ ಗ್ರಾಮೀಣ ಅಭಿಯಾನವು ಪ್ರಾರಂಭವಾಗಿದೆ. ಮೂಲತಃ ಇದೊಂದು ಸ್ವಚ್ಛತೆಗೆ ಸಂಬಂಧಿಸಿದಂತೆ ಗ್ರಾಮ...
26/08/2019

ಕೇಂದ್ರ ಸರ್ಕಾರದಿಂದ ನಡೆಸಲಾಗುವ ಸ್ವಚ್ಛ ಸರ್ವೇಕ್ಷಣೆ ಗ್ರಾಮೀಣ ಅಭಿಯಾನವು ಪ್ರಾರಂಭವಾಗಿದೆ. ಮೂಲತಃ ಇದೊಂದು ಸ್ವಚ್ಛತೆಗೆ ಸಂಬಂಧಿಸಿದಂತೆ ಗ್ರಾಮ ಮಟ್ಟಗಳಲ್ಲಿ ಏನೆಲ್ಲ ಪ್ರಗತಿ ಸಾಧಿಸಲಾಗಿದೆ ಎಂಬುದನ್ನು ಅಳೆದು ತೂಗಿ ನೋಡುವ ಪರೀಕ್ಷೆ. ನಮ್ಮ ದೇಶದ ಪ್ರತಿಯೊಂದು ರಾಜ್ಯಗಳು ಈ ಸ್ವಚ್ಛತೆಯ ಸ್ಪರ್ಧೆಯಲ್ಲಿ ಭಾಗವಹಿಸುತ್ತವೆ.

ವಿಶೇಷವೆಂದರೆ ಈ ಸ್ಪರ್ಧೆಯಲ್ಲಿ ಎಲ್ಲ ನಾಗರಿಕರೂ ಸಹ ಭಾಗವಹಿಸಬಹುದಾಗಿದೆ. ಮೂರು ಪ್ರಕಾರಗಳಲ್ಲಿ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದ್ದು ಪ್ರತಿಯೊಬ್ಬ ನಾಗರಿಕ ಹಂಚಿಕೊಳ್ಳುವ ಅಭಿಪ್ರಾಯಗಳು ಸಹ ಕೆಲ ಅಂಕಗಳನ್ನು ಗಳಿಸಿಕೊಡುತ್ತವೆ. ಹೆಚ್ಚು ಅಂಕಗಳಿಸುವ ರಾಜ್ಯಗಳಿಗೆ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಕಳೆದ ಬಾರಿ ಕರ್ನಾಟಕದಲ್ಲಿ ಸಾಮಾನ್ಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರಲಿಲ್ಲ.

ಆದರೆ, ಈ ಬಾರಿ ಹೀಗಾಗದಂತೆ ನಾವೆಲ್ಲರೂ ಸಹಕರಿಸಿ ನಮ್ಮ ನಾಡು ಜಯಶಾಲಿಯಾಗಲು ಪ್ರಯತ್ನಿಸೋಣ. ಬನ್ನಿ ಈ ಆಪ್ ಅನ್ನು ಡೌನ್ಲೋಡ್ ಮಾಡಿಕೊಂಡು ನಿಮ್ಮ ಸ್ಥಳದ ಸ್ವಚ್ಛತೆಗೆ ಸಂಬಂಧಿಸಿದಂತೆ ಕೇಳಲಾಗಿರುವ ಕೇವಲ ನಾಲ್ಕು ಪ್ರಶ್ನೆಗಳಿಗೆ ಉತ್ತರಿಸಿ.

ಈ ಮೂಲಕ ಸ್ವಚ್ಛತೆಗೆ ನಾವೂ ಸಹ ಬದ್ಧರಾಗಿದ್ದೇವೆ ಎಂಬ ಸಂದೇಶ ಸಾರಿ. ಈ ಆಪ್ ಡೌನ್ಲೋಡ್ ಮಾಡಿ ಉತ್ತರಿಸಲು ಕೇವಲ ಒಂದು ನಿಮಿಷ ಸಾಕು.

ಆಪ್ ಡೌನ್ಲೋಡ್ ಮಾಡಲು :

Address

#3, Mahalakshmi Layout, Gokul Road, Hubballi
Bangalore
580030

Website

Alerts

Be the first to know and let us send you an email when ಇಲ್ಲಿದೆ ಪಯಣ ಇಲ್ಲಿದೆ ದಾರಿ posts news and promotions. Your email address will not be used for any other purpose, and you can unsubscribe at any time.

Share