Adhyatma

Adhyatma Spiritualism is a dualist metaphysical belief that the world is made up of at least two fundamental substances, matter and spirit.

Spirituality is the generic term for a widely held belief system which includes spiritual awakening and living in harmony with the Universe as their main themes. Spiritual practices, including meditation, prayer and contemplation, are intended to develop an individual's inner life; spiritual experience includes that of connectedness with a larger reality, yielding a more comprehensive self; with o

ther individuals or the human community; with nature or the cosmos; or with the divine realm. Spirituality is often experienced as a source of inspiration or orientation in life. It can encompass belief in an all-pervading divine principle inherent within creation, and yet transcendent at the same time. This paradoxical approach to understanding the nature of reality follows the generic panentheistic formula whereby God, or some divine source, is All in All, and yet is not limited to even these things.

13/03/2023
🕉️ *ನರಸಿಂಹ ಜಯಂತಿ* 🕉️🔯ವೈಶಾಖ ಮಾಸದಲ್ಲಿ ಅಕ್ಷಯ ತೃತೀಯದ ನಂತರ ಬರುವ ಒಂದು ಪ್ರಮುಖ ಪರ್ವ ನರಸಿಂಹ ಜಯಂತಿ. 🔯ಪುರಾಣ ಪ್ರಸಿದ್ಧವಾದ ದಶಾವತಾರಗಳಲ್...
24/05/2021

🕉️ *ನರಸಿಂಹ ಜಯಂತಿ* 🕉️

🔯ವೈಶಾಖ ಮಾಸದಲ್ಲಿ ಅಕ್ಷಯ ತೃತೀಯದ ನಂತರ ಬರುವ ಒಂದು ಪ್ರಮುಖ ಪರ್ವ ನರಸಿಂಹ ಜಯಂತಿ.

🔯ಪುರಾಣ ಪ್ರಸಿದ್ಧವಾದ ದಶಾವತಾರಗಳಲ್ಲಿ ಶ್ರೀ ನರಸಿಂಹ ದೇವರ ಅವತಾರವು ನಾಲ್ಕನೆಯದು.

🔯ವೈಶಾಖ ಶುದ್ಧ ಚತುರ್ದಶಿಯಂದು ಸಮಸ್ತ ದೇವತೆಗಳ ಕೋರಿಕೆಯಂತೆ ದುಷ್ಟ ಹಿರಣ್ಯಕಶಿಪುವಿನ ಸಂಹರಿಸಲು ಸರ್ವೋತ್ತಮನಾದ ಶ್ರೀಮಹಾವಿಷ್ಣುವು ತಾಳಿದ ಅವತಾರವಿದು.

🔯ನೃಸಿಂಹಾತಾರದಲ್ಲಿ ಉಳಿದ ಎಲ್ಲಾ ಅವತಾರಗಳಂತೆ ದುಷ್ಟ ಶಿಕ್ಷಣ ಶಿಷ್ಟ ಪರಿಪಾಲನಗಳ ಜೊತೆಗೆ ಭಗವಂತನು ಅಸಾಧಾರಣವಾದ ತನ್ನ ನೈಜ ವಿಭೂತಿಯನ್ನು ಭಗವತ್ ತತ್ತ್ವವನ್ನೂ ಸ್ಪಷ್ಟವಾಗಿ
ಪ್ರಕಟಪಡಿಸಿದ್ದಾನೆ.

🔯ಹಿರಣ್ಯಕಶಿಪು ಸಾಮಾನ್ಯ ವ್ಯಕ್ತಿಯಲ್ಲ ; ವೈಕುಂಠವಾಸಿಯೇ ಆಗಿದ್ದು ಶಾಪಗ್ರಸ್ತನಾಗಿ ಭೂಮಿಯಲ್ಲಿ ಹುಟ್ಟಿ ಕಠಿಣ ತಪಸ್ಸಿನಿಂದ ಬ್ರಹ್ಮನಿಂದ ವರಪಡೆದು, ಮೂರು ಲೋಕಗಳನ್ನು ಗೆದ್ದ ಜಗತ್ ವಿಜೇತ.

🔯ಜನರು ಹೇಳುವ ದೇವರು ಎಂಬುದು ಇರುವುದಾದರೆ ಅದು ನಾನೇ ಅಲ್ಲದೇ ಬೇರೆ ಯಾರೂ ಇಲ್ಲ ಎಂಬ ದುರಾಗ್ರಹಿ. ಇಂಥಹವನಿಗೆ ಮಗ ಭಕ್ತಪ್ರಹ್ಲಾದ ಮಾತಿನಲ್ಲಿ ನಂಬಿಕೆ ಬರಲಿಲ್ಲ‌, ಅವನಿಗೆ ಬೇಕು ಪ್ರತ್ಯಕ್ಷ ಪ್ರತೀತಿ.

🔯ನಿನ್ನ ವಿಷ್ಣುವು ಎಲ್ಲಾ ಕಡೆ ಇರುವುದಾದರೇ ಈ ಕಂಬದಲ್ಲಿದ್ದಾನೋ? ಆಗ ನಿರ್ಭಯನಾದ ಶ್ರದ್ಧಾವಂತನಾದ ಪ್ರಹ್ಲಾದನು ಕೊಟ್ಟ ಉತ್ತರವೂ ಅಷ್ಟೇ ಸ್ಪಷ್ಟ ಹಾಗೂ ನಿಸ್ಸಂದಿಗ್ದವಾಗಿತ್ತು.

🔯ಎಲ್ಲೆಲ್ಲೂ ಇರುವವನು ಈ ಕಂಬದಲ್ಲಿ ಮಾತ್ರ ಏಕಿಲ್ಲ ಕಂಬದಲ್ಲಿ ಇಲ್ಲ ಎಂದರೆ ಭಗವಂತನ ಸರ್ವವ್ಯಾಪಕತ್ವಕ್ಕೆ ಅಡ್ಡಿ ಬರುವುದಿಲ್ಲವೇ? ಕಂಬದಲ್ಲೂ ಬಿಂಬದಲ್ಲೂ ಎಲ್ಲೆಡೆಯೂ ಇದ್ದಾನೆ, ಎಂದಾಗ ಹಿರಣ್ಯಕಶಿಪು ಕಂಬವನ್ನು ಝಾಡಿಸಿದಾಗ ಆ ಜಡ ಕಂಬದಲ್ಲಿ ಚಿನ್ಮಯನಾದ ನರಸಿಂಹ ರೂಪದಿಂದ ಭಗವಂತನು ಪ್ರಕಟಗೊಂಡು ದೈತ್ಯ ಹಿರಣ್ಯಕಶಿಪುವನ್ನು ಸಂಹಾರಗೈಯುತ್ತಾನೆ.

🔯ನರಸಿಂಹನ ಮೂರ್ತಿಯಲ್ಲಿ ಮನುಷ್ಯದೇಹ ಮತ್ತು ಸಿಂಹದ ಮುಖವನ್ನು ನೋಡುತ್ತೇವೆ. ಜೀವವಿಕಾಸವಾದ ಅನುಗುಣವಾಗಿ ದಶಾವತಾರಗಳಿಗೆ ವ್ಯಾಖ್ಯಾನ ಮಾಡುತ್ತಾ, ಕೇವಲ ಜಲಚರ ಪ್ರಾಣಿಯಾಗಿ ಮೀನು-ಮತ್ಸ್ಯಾವತಾರದಿಂದ ವಿಕಾಶದೆಶೆ ಪ್ರಾರಂಭ.

🔯ಜಲಸ್ಥಳಗಳೆರಡರಲ್ಲೂ ಸಂಚರಿಸುತ್ತಾ ಮುಂದಿನ ಘಟ್ಟ ಆಮೆ ಕೂರ್ಮಾವತಾರದ ಭಾವನೆಗೆ ಕಾರಣವಾಯ್ತು. ಅದಕ್ಕಿಂತಲೂ ಹೆಚ್ಚು ವಿಕಾಸವುಳ್ಳದಾಗಿರುವ ಘೋರ ಪರಾಕ್ರಮವುಳ್ಳ ಹಂದಿ ವರಾಹವತಾರವು ಅನಂತರ ಬರುವುದು.

🔯ಸಿಂಹಮುಖ ನರದೇಹದ ನರಸಿಂಹ ಅವತಾರದ ನಂತರ ಕೇವಲ ಮನುಷ್ಯ ರೂಪದ ವಾಮನಾವತಾರವು ಅದಕ್ಕಿಂತಲೂ ಹೆಚ್ಚಿನ ವಿಕಾಸವನ್ನು ತೋರಿಸುತ್ತದೆ. ಹೀಗೆಯೇ ಉತ್ತರೋತ್ತರ ವಿಕಾಸವಾಗಿ ಪರಶುರಾಮ, ಶ್ರೀರಾಮ, ಶ್ರೀಕೃಷ್ಣ ಮತ್ತು ಕೊನೆಗೆ ವಿಕಾಸದ ಚರಮ ಸೀಮೆಯಾದ ಬುದ್ಧನ ಅವತಾರ.

🔯ಹಿರಣ್ಯಕಶಿಪು ಬ್ರಹ್ಮನ ಬಳಿ ಕೇಳಿದ ವರದಲ್ಲೇ ಅಡಕವಾಗಿದೆ ಬ್ರಹ್ಮದೇವಾ! ನನಗೆ ಕೆಳಗಾಗಲಿ ಮೇಲಾಗಲಿ ಸಾವು ಬರಬಾರದು, ಹಗಲಾಗಲೀ ರಾತ್ರಿಯಾಗಲೀ ನಾನು ಸಾಯಬಾರದು, ಮನುಷ್ಯರಿಂದಾಗಲೀ ಪಶುಗಳಿಂದಾಗಲಿ ಮೃತ್ಯು ಬರಬಾರದು, ಅಸ್ತ್ರದಿಂದಾಗಲೀ ಶಸ್ತ್ರದಿಂದಾಗಲಿ ನಾನು ಅಜೇಯನಾಗಿರಬೇಕು, ಮನೆಯ ಒಳಗಾಗಲೀ ಹೊರಗಾಗಲಿ ಸಾವು ಬರಕೂಡದು, ಹೆಚ್ಚೇಕೆ ಬ್ರಹ್ಮಾ, ನೀನು ಸೃಷ್ಟಿಸಿದ ಯಾವುದರಿಂದಲೂ ನನಗೆ ಮರಣ ಬರಬಾರದು.

🔯ಅದರಂತೆ ಈ ವರದಿಂದಾಗಿ ಭಗವಂತನು ಮನುಷ್ಯನೂ ಅಲ್ಲ-ಪಶುವೂ ಅಲ್ಲದ ನರಸಿಂಹನಾದ ಕೆಳಗೂ ಅಲ್ಲ ಮೇಲೂ ಅಲ್ಲದೇ ತೊಡೆಯ ಮೇಲೆ ಒಳಗೂ ಅಲ್ಲ-ಹೊರಗೂ ಅಲ್ಲದ ಹೊಸ್ತಿಲಲ್ಲಿ, ರಾತ್ರಿಯೂ ಅಲ್ಲ- ಹಗಲೂ ಅಲ್ಲ ಸಂಧ್ಯಾಕಾಲದಲ್ಲಿ, ಶಸ್ತ್ರವೂ ಅಲ್ಲ ಅಸ್ತ್ರವೂ ಅಲ್ಲದ ನಖ (ಉಗುರು)ಗಳಿಂದ ಬ್ರಹ್ಮನನ್ನೇ ಸೃಷ್ಠಿಸಿದ ಭಗವಂತನು ಸ್ವ ಇಚ್ಚೆಯಿಂದ ಸಂಹರಿಸುತ್ತಾನೆ.

🔯ಸಿಂಹವು ಸಾಕ್ಷಾತ್ ಪರಾಕ್ರಮ, ತೇಜದ ಸಾಕಾರ ರೂಪ- ಎಲೆಲ್ಲಿ ಭವ್ಯತೆ ದಿವ್ಯತೆ- ಔನ್ನತ್ಯವಿದೆಯೋ ಅಲೆಲ್ಲಾ ತನ್ನ ಅಸ್ತಿತ್ವವಿದೆ ಎಂದು ಭಗವದ್ಗೀತೆಯ ವಿಭೂತಿಯೋಗದಲ್ಲಿ ಶ್ರೀಕೃಷ್ಣನೇ ಹೇಳಿಕೊಂಡಿದ್ದಾನೆ‌. ಹಿರಣ್ಯಕಶಿಪು ಎಷ್ಟೇ ಬುದ್ಧಿವಂತಿಕೆಯಿಂದ ಮರಣಬಾರದ ತರಹ ವರ ಪಡೆದಿದ್ದರೂ ಅದೆಲ್ಲವನ್ನೂ ವ್ಯರ್ಥಮಾಡಲು ಪರಮಾತ್ಮನು ಗೈದ ತಂತ್ರ ಎಂಥಹ ಅದ್ಭುತವಾದುದು. 'ದೇವರ ಬಳಿ ನಮ್ಮಗಳ ಯಾವ ಬುದ್ಧಿವಂತಿಕೆಯೂ ನಡೆಯಲಾರದು.

🔯ಆ ಬುದ್ಧಿಯನ್ನು ಕೊಡುವವನೇ ಭಗವಂತನು ಅದಕ್ಕಾಗಿಯೇ ಅವನಿಗೆ ಸರ್ವತಂತ್ರ ಸ್ವತಂತ್ರ' ಎಂದು ಹೇಳುವುದು.

🔯ಅಂತರಂಗವನ್ನು ಅಸುರಿಶಕ್ತಿಗಳು ಆಕ್ರಮಣಮಾಡಿದಾಗ ಅದು ಹಿರಣ್ಯಕಶಿಪುವಿನ ಸಭಾಸ್ತಂಭವಾಗುತ್ತದೆ. ಪ್ರಹ್ಲಾದರೂಪಿಯಾದ ಪರಿಶುದ್ಧಾತ್ಮನ ಪರಾಭಕ್ತ್ತಿಯ ಪ್ರಭಾವದಿಂದ ಪರಮಾತ್ಮ ಶ್ರೀನರಸಿಂಹನು ಪ್ರಣವ ಗರ್ಜನೆಯನ್ನು ಮಾಡುತ್ತಾ ಆ ಸ್ತಂಭವನ್ನು ಭೇಧಿಸಿಕೊಂಡು ದೈತ್ಯಭೀಕರವಾದ ರೂಪದಿಂದ ಆವಿರ್ಭವಿಸುತ್ತಾನೆ ಅಂತರಂಗದ ಮನೆಯ ಒಳ ಹೊರಗಿನ ಮಧ್ಯಸ್ಥಾನವಾದ ಹೊಸ್ತಲಿನಲ್ಲಿ ಕುಳಿತು, ಲಯವಿಕ್ಷೇಪಗಳ ಸಂಧಿಕಾಲದ ಸಂಧ್ಯಾಸಮಯದಲ್ಲಿ ಅವಿದ್ಯಾರೂಪಿಯಾದ ಅಸುರರಾಜನ ಎದೆಯನ್ನು ಸೀಳಿ ಅವನ ಸಿಂಹಾಸನವನ್ನು ಏರಿ ಕುಳಿತುಕೊಳ್ಳುತ್ತಾನೆ.

🔯ವಾಸ್ತವವಾಗಿ ಅದು ಭಗವದ್ಧ್ಯಾನ ಸಿಂಹಾಸನವೇ ಅಸುರ ಆಕ್ರಮಣದಿಂದ ಅದನ್ನು ಮುಕ್ತಗೊಳಿಸಿಲು ಅಂತರಂಗದ ಸ್ವಾಮಿಯ ಪೂಜೆಗೆ ಪ್ರಶಸ್ತವಾದ ಕಾಲವು ಸಂಧ್ಯಾಕಾಲವೇ.

🔯ಶ್ರೀ ನರಸಿಂಹ ಸ್ವಾಮಿಯ ಶಿರೋ ಕಂಠದ ಮೇಲಿರುವ ಭಾಗವು ರುದ್ರ ದೇವರ ಜಾಗ ‘‘ಆಶೀರ್ಷಂ ರುದ್ರಮೀಶಾನಂ’’ ರುದ್ರ ರೂಪಿಯಾದ ಆ ದೇವನಿಗೆ ಪ್ರದೋಷಕಾಲದಲ್ಲಿ ಪೂಜೆ ಮಾಡುವುದು ಒಳ್ಳೆಯದು .
ಓಂ ನಮೋ ನರಸಿಂಹ ಸ್ವಾಮಿ ನಮಹ🙏🏻🙏🏻

ಸರ್ವರಿಗೂ ಶೀ ಲಕ್ಷ್ಮೀ ನೃಸಿಂಹ ಸ್ವಾಮಿಯ ಶುಭತರಲಿ.

ಮರದ ಬಾಗಿಣದಲ್ಲಿ ಹಾಕುವ ಪದಾರ್ಥಗಳು ಮತ್ತು ದೇವತೆಗಳು1 ಅರಿಸಿನ _ಗೌರಿದೇವೀ.2 ಕುಂಕುಮ _ಮಹಾಲಕ್ಷ್ಮೀ3 ಸಿಂಧೂರ_ಸರಸ್ವತೀ4 ಕನ್ನಡಿ _ರೂಪಲಕ್ಷ್ಮೀ...
21/08/2020

ಮರದ ಬಾಗಿಣದಲ್ಲಿ ಹಾಕುವ ಪದಾರ್ಥಗಳು ಮತ್ತು ದೇವತೆಗಳು

1 ಅರಿಸಿನ _ಗೌರಿದೇವೀ.
2 ಕುಂಕುಮ _ಮಹಾಲಕ್ಷ್ಮೀ
3 ಸಿಂಧೂರ_ಸರಸ್ವತೀ
4 ಕನ್ನಡಿ _ರೂಪಲಕ್ಷ್ಮೀ.
5 ಬಾಚಣಿಗೆ _ಶೃಂಗಾರಲಕ್ಷ್ಮೀ
6 ಕಾಡಿಗೆ _ಲಜ್ಜಾಲಕ್ಷ್ಮೀ.
7 ಅಕ್ಕಿ _ಶ್ರೀ ಲಕ್ಷ್ಮೀ.
8 ತೊಗರಿಬೇಳೆ _ವರಲಕ್ಷ್ಮೀ
9 ಉದ್ದಿನಬೇಳೆ_ಸಿದ್ದಲಕ್ಷ್ಮೀ
10 ತೆಂಗಿನಕಾಯಿ_ಸಂತಾನಲಕ್ಷ್ಮೀ
11 ವೀಳ್ಯದ ಎಲೆ_ಧನಲಕ್ಷ್ಮೀ
12 ಅಡಿಕೆ _ಇಷ್ಟಲಕ್ಷ್ಮೀ
13 ಫಲ(ಹಣ್ಣು) _ಜ್ಞಾನಲಕ್ಷ್ಮೀ
14 ಬೆಲ್ಲ _ರಸಲಕ್ಷ್ಮೀ
15 ವಸ್ತ್ರ _ವಸ್ತ್ರಲಕ್ಷ್ಮೀ
16 ಹೆಸರುಬೇಳೆ _ವಿದ್ಯಾಲಕ್ಷ್ಮೀ

ಮುತೈದೆ ದೇವತೆಯರು 16 ಜನರು.
ಇವರನ್ನು ಷೋಡಶಲಕ್ಷ್ಮೀಯರು ಎಂದು ಕರೆಯುತ್ತಾರೆ..

ಗೌರಿ,ಪದ್ಮ, ಶುಚಿ, ಮೇಧಾ, ಸಾವಿತ್ರಿ, ವಿಜಯಾ, ಜಯಾ, ದೇವಸೇನಾ, ಸಾಹಾ, ಮಾತರಲೋಕಾ, ಮಾತಾರಾ, ಶಾಂತೀ,ಪೃಥ್ವಿ, ಧೃತೀ, ತುಷ್ಟೀ,ಸ್ವಧಾದೇವಿ..

ಸೀರೆ ಸೆರಗಿನಲ್ಲಿ ಮಹಾಲಕ್ಷ್ಮೀಯು ಸೌಭಾಗ್ಯ ರೂಪದಲ್ಲಿರುವುದರಿಂದ ಸೆರಗು ಹಿಡಿದು ಮರದ ಬಾಗಿಣ ಕೊಡುತ್ತಾರೆ

ಮರದ ಬಾಗಿಣಕ್ಕೆ ಸಂಸ್ಕೃತದಲ್ಲಿ *ವೇಣುಪಾತ್ರ* ಎಂದು ಹೇಳುತ್ತಾರೆ

ಮರದಬಾಗಿಣದಲ್ಲಿ ನಾರಾಯಣನ ಅಂಶ ಇರುತ್ತದೆ..

ಮರವೆಂಬ ನಾರಾಯಣ ಮತ್ತು ಒಳಗಿರುವ ಲಕ್ಷ್ಮಿಯರು ತರಹ ಜೊತೆಯಲ್ಲಿ,

ದಂಪತಿಗಳು ಲಕ್ಷ್ಮೀ-ನಾರಾಯಣರ ತರಹ ಇರಲಿ ಅನ್ನೋ ಕಾರಣಕ್ಕೆ ಮತ್ತು ಸುಮಂಗಲಿ ತನ ಯಾವಾಗಲೂ ಇರಲಿ ಅನ್ನೋ ಕಾರಣಕ್ಕೆ 16 ಸುಮಂಗಲೀ ದೇವತೆಗಳ ಸಾಕ್ಷಿಯಾಗಿ, ಬಾಗಿಣ ಕೊಡುತ್ತಾರೆ..

ಈ 16 ದೇವತೆಗಳು ನಿತ್ಯಸುಮಂಗಲಿಯರು

ಈ 16 ದೇವತೆಗಳು ಸಂಸಾರದಲ್ಲಿ ಯಾವುದೇ ತರಹದ ಕಷ್ಟ,ನೋವು,ದುಃಖ ಬಂದರೂ ನಮ್ಮನ್ನು ರಕ್ಷಿಸಲಿ ಎಂದು ನೆನೆದು ಬಾಗಿಣ ಕೊಡಬೇಕು..

ಈ 16 ದೇವತೆಗಳನ್ನು ಸ್ಮರಿಸುತ್ತಾ ಸ್ವರ್ಣಗೌರೀ ಹಬ್ಬದಲ್ಲಿ ಮಾಡುವ ಹೋರಾಪೂಜೆ, ಎಂದರೆ ದಾರಕ್ಕೆ ಮಾಡುವ ಪೂಜೆ..

16 ಅರಿಸಿನ ದಾರ,
16 ಗಂಟುಗಳು,
16 ಬಾಗಿನ,
16 ಎಳೆ ಗೆಜ್ಜೆವಸ್ತ್ರ, ಪೂಜಿಸಬೇಕೆಂದು ಗ್ರಂಥಗಳಲ್ಲಿ ಹೇಳಿದ್ದಾರೆ

ದಾನಗಳು ಮತ್ತು ಫಲಗಳು

1.ಅರಿಸಿನ ದಾನ
ಅರಿಸಿನ ದಾನ ಮಾಡಿದಷ್ಟು ರೋಗ ನಿವಾರಣೆ ಆಗುತ್ತದೆ ಸುಮಂಗಲಿಯರಿಗೆ ಸೌಭಾಗ್ಯತನ ವೃದ್ಧಿಸುತ್ತದೆ
ಸುಮಂಗಲಿಯರಿಗೆ ಸುಮಂಗಲಿತನ ಯಾವಾಗಲೂ ಇರಲಿ ಎಂಬ ಉದ್ದೇಶಕ್ಕೆ ಮೊದಲು ಅರಿಸಿನ ಕೊಡುತ್ತಾರೆ..

2.ಕುಂಕುಮ ದಾನ
ಕುಂಕುಮವನ್ನು ಯಾರು ಧರಿಸುತ್ತಾರೋ ಅವರು ಬಹಳ ತೇಜಸ್ಸು ಮತ್ತ ನಂಬಿಕೆ ಜಾಸ್ತಿ ಆಗುತ್ತೆ ಕುಂಕುಮ ಧಾರಣೆಯಿಂದ ದೈವಶಕ್ತಿ ಜಾಸ್ತಿಯಾಗುತ್ತದೆ..
ದೃಷ್ಟಿದೋಷ ನಿವಾರಣೆ ಆಗುತ್ತದೆ ಕೋಪ, ಹಠ,ಕಮ್ಮಿ ಆಗುತ್ತದೆ

3.ಸಿಂಧೂರ ದಾನ
ಸತಿ ಪತಿ ಕಲಹ ನಿವಾರಣೆ ರೋಗಭಾಧೆ,ಋಣಭಾದೆ, ನಿವಾರಣೆ ಮನೆಯಲ್ಲಿ ಸಂದೇಹ, ಒಳಜಗಳ, ಮಾಂತ್ರಿಕ ದೋಷಗಳು ನಿವಾರಣೆಯಾಗುತ್ತದೆ

4.ಕನ್ನಡೀ(ರೂಪಲಕ್ಷ್ಮೀ)

ಕನ್ನಡಿಯನ್ನು ದಾನ ಮಾಡಿದರೆ ಸಮಸ್ತ ವಾಸ್ತು ದೋಷ, ದೃಷ್ಟಿದೋಷ ನಿವಾರಣೆಯಾಗುತ್ತದೆ..

5.ಬಾಚಣಿಗೆ
ಬಾಚಣಿಗೆ ದಾನ ಮಾಡಿದರೆ, ತಲೆಗೆ ಸಂಭಂದಿಸಿದ ಖಾಯಿಲೆಗಳು , ಯೋಚನೆಗಳು ಕಡಿಮೆಯಾಗುತ್ತವೆ, ಮತ್ತು ರೂಪವತಿಯಾಗುತ್ತಾರೆ..

6.ಕಾಡಿಗೆ
ದೃಷ್ಟಿ ಆಗೋದು, ಕಣ್ಣಿನ ಕೆಳಗೆ ಕಪ್ಪಾಗೋದು ಕಮ್ಮಿಯಾಗುತ್ತದೆ ಪೂರ್ಣ ಸ್ತ್ರೀ ತತ್ವ ಹೆಚ್ಚಾಗುತ್ತದೆ.‌.

7 ಅಕ್ಕಿ
ಯಾರು ಅಕ್ಕಿಯನ್ನು ದಾನ ಮಾಡುತ್ತಾರೋ ಅವರಿಗೆ ಮನಸ್ಸಿಗೆ ಸಂಭಂದಪಟ್ಟಂತಹ ಸರ್ವ ರೋಗಗಳು, ಯೋಚನೆಗಳು ನಿವಾರಣೆಯಾಗುತ್ತವೆ ಆರೋಗ್ಯಭಾಗ್ಯವಾಗುತ್ತದೆ ಮನೆಯಲ್ಲಿ ಕಲಹಗಳು ನಿವಾರಣೆಯಾಗುತ್ತದೆ

8 ತೊಗರಿಬೇಳೆ

ತೊಗರೀಬೇಳೆ ದಾನದಿಂದ ಕುಜದೋಷ ನಿವಾರಣೆಯಾಗುತ್ತದೆ ವಂಶಪಾರಂಪರ್ಯವಾಗಿ ಬಂದಿರುವ ಕುಜದೋಷಗಳು , ಸರ್ಪದೋಷಗಳು ನಿವಾರಣೆಯಾಗುತ್ತದೆ ರಜಸ್ವಲಾ ದೋಷಗಳು ನಿವಾರಣೆಯಾಗುತ್ತದೆ ರಕ್ತದೊತ್ತಡ (B.P)ನಾರ್ಮಲ್ ಆಗಿ ಆರೋಗ್ಯವಂತರಾಗುತ್ತಾರೆ ಮನೆಯಲ್ಲಿ ಇರುವ ವಿವಾಹ ದೋಷಗಳು ನಿವಾರಣೆಯಾಗುತ್ತವೆ

9 ಉದ್ದಿನ ಬೇಳೆ

ಪಿತೃಶಾಪ ನಿವಾರಣೆಯಾಗುತ್ತದೆ ನೀವು ಶ್ರಾಧ್ಧಗಳಲ್ಲಿ ಮಾಡಿರುವ ತಪ್ಪುಗಳ ಫಲ ಕಡಿಮೆಯಾಗುತ್ತದೆ ಅಪಮೃತ್ಯುಗಳು ನಿವಾರಣೆಯಾಗುತ್ತದೆ ಅಗೋಚರ ರೋಗಗಳು ನಿವಾರಣೆಯಾಗುತ್ತದೆ ಪತಿಯಲ್ಲಿರುವ ಸರ್ವ ದೋಷಗಳು ನಿವಾರಣೆಯಾಗುತ್ತವೆ

10 ತೆಂಗಿನಕಾಯಿ

ಇಷ್ಟಾರ್ಥಸಿದ್ಧಿಯಾಗುತ್ತದೆ ತೆಂಗಿನಕಾಯಿ ಗೆ "ಇಷ್ಟಾರ್ಥ ಪ್ರದಾಯಿನಿ" ಅಂತನೂ ಹೆಸರಿದೆ ಮಕ್ಕಳು ಸನ್ಮಾರ್ಗದಲ್ಲಿ ನಡೆಯುತ್ತಾರೆ ಕಾರ್ಯಗಳು ಪೂರ್ಣಫಲ ಕೊಡಬೇಕಾದರೆ " ತೆಂಗಿನಕಾಯಿ " ದಾನ ಮಾಡಲೇಬೇಕು ಸರ್ವಕಾರ್ಯ ವಿಜಯವಾಗುತ್ತದೆ
ಆರೋಗ್ಯಭಾಗ್ಯ, ನೆಮ್ಮದಿ, ಸಂತೋಷ ದೊರೆಯುತ್ತದೆ
ಸರ್ವ ಸಂತಾನ ಸಮಸ್ಯೆಗಳು ನಿವಾರಣೆಯಾಗುತ್ತದೆ
ಉದರ ಸಂಭಂದಿ ರೋಗಗಳು ನಿವಾರಣೆಯಾಗುತ್ತದೆ

11 ವೀಳ್ಯದೆಲೆ

ವೀಳ್ಯದೆಲೆಗೆ ದೇವತೆ "ಧನಲಕ್ಷ್ಮೀ"
ತಾಂಬೂಲ ದಾನವನ್ನು ಮಾಡುವದರಿಂದ ಧನಲಕ್ಷ್ಮೀ ಅನುಗ್ರಹವಾಗಿ, ಧನಪ್ರಾಪ್ತಿಯಾಗುತ್ತದೆ ಮಹಾಲಕ್ಷ್ಮೀ ಪ್ರಸನ್ನಳಾಗುತ್ತಾರೆ ಹಣದ ಸಮಸ್ಯೆ ನಿವಾರಣೆಯಾಗುತ್ತದೆ.‌

12 ಅಡಿಕೆ

ಅಡಿಕೆಗೆ ಸಂಸ್ಕೃತದಲ್ಲಿ " ಪೂಗೀಫಲ" ಎಂದು ಹೆಸರು..
ಅಡಿಕೆಗೆ ಅಭಿಮಾನ ದೇವತೆ "ಇಷ್ಟಲಕ್ಷ್ಮೀ

ಯಾರು ವೀಳ್ಯದೆಲೆ-ಅಡಿಕೆ ತಾಂಬೂಲವನ್ನು ಪ್ರತಿದಿನ ಹಾಕಿಕೊಳ್ಳುತ್ತಾರೋ ಅವರ ಇಷ್ಟಾರ್ಥ ಹಾಗೂ ಬಯಕೆಗಳು ಬೇಗನೇ ನೆರವೇರುತ್ತದೆ

ಬರೀ ಅಡಿಕೆಯನ್ನು ತಿಂದರೆ "ಬ್ರಹ್ಮಹತ್ಯಾ" ದೋಷ ಬರುವುದು ಆದ್ದರಿಂದ ಬರೀ ಅಡಿಕೆ ತಿನ್ನಬಾರದು

13 ಫಲದಾನ
ಫಲದಾನಕ್ಕೆ ಜ್ಞನಲಕ್ಷ್ಮೀ ಅಧಿಪತಿ ಫಲದಾನ ಮಾಡಿದರೆ ನಿಮ್ಮ ಮನೆಯಲ್ಲಿ ಸಕಲ ಕಾರ್ಯಗಳೂ ಸುಗಮವಾಗಿ, ಸುಲಲಿತವಾಗಿ ಯಾವುದೇ ತೊಂದರೆಯಿಲ್ಲದೆ, ಯಶಸ್ವಿಯಾಗಿ, ಲಾಭವಾಗಿ ನಡೆಯುತ್ತದೆ

ದೇವಿ ದೇವಾಲಯಗಳಲ್ಲಿ ಹಣ್ಣು ನೈವೇದ್ಯ ಮಾಡಿಸಿ ಸುಮಂಗಲಿಯರಿಗೆ ದಾನ ಮಾಡಿದರೆ ಸ್ತ್ರೀ ಶಾಪಗಳು ನಿವಾರಣೆಯಾಗುತ್ತದೆ

14 ಬೆಲ್ಲ (ರಸಲಕ್ಷ್ಮೀ)

ಬೆಲ್ಲದ ಅಭಿಮಾನ ದೇವತೆ "ರಸಲಕ್ಷ್ಮೀ
ಬೆಲ್ಲದಲ್ಲಿ " ಬ್ರಹ್ಮದೇವರು" , ಶ್ರೀ ಮಹಾಲಕ್ಷ್ಮೀ, ಶ್ರೀ ಮಹಾಗಣಪತಿ ದೇವರ ಸಾನಿಧ್ಯ ಇರುತ್ತದೆ

ಬೆಲ್ಲದಾನ ಮಾಡಿದರೆ ಬಹಳಷ್ಟು ಯೋಚನೆಗಳು ನಿವಾರಣೆಯಾಗುತ್ತದೆ ನಿತ್ಯದಾರಿದ್ರ್ಯ ನಿವಾರಣೆಯಾಗುತ್ತದೆ ಜೀವನದಲ್ಲಿ ಉತ್ತಮ ಮಟ್ಟಕ್ಕೆ ಅಭಿವೃದ್ಧಿ ಆಗುತ್ತಾರೆ

15 ವಸ್ತ್ರಲಕ್ಷ್ಮೀ"

ಸುಮಂಗಲಿಯರು ಪ್ರತ್ಯಕ್ಷ "ಸ್ತ್ರೀದೇವತೆ" ಗಳ ಸ್ವರೂಪ ಹಾಗೂ ಕುಲದೇವತೆಯ ಸ್ವರೂಪ

ಆದಿಶಕ್ತಿಯ ಸ್ವರೂಪ ಎಂದು ತಿಳಿದು ಬಾಗಿನ ಕೊಡುವಾಗ ವಸ್ತ್ರದಾನ ಮಾಡಬೇಕು

ಹೀಗೆ ಮಾಡುವದರಿಂದ "ವಸ್ತ್ರ" ದಾರಿದ್ರ್ಯ ನಿವಾರಣೆಯಾಗುತ್ತದೆ ಕುಲದೇವತೆ ತೃಪ್ತಿಯಾಗುತ್ತದೆ

ಸುಮಂಗಲೀ ದೋಷಗಳು ನಿವಾರಣೆಯಾಗುತ್ತದೆ ಮನೆಯಲ್ಲಿನ ಸ್ತ್ರೀ ದೋಷಗಳು ನಿವಾರಣೆಯಾಗುತ್ತದೆ

16 ಹೆಸರುಬೇಳೆ

ವಿದ್ಯಾಲಕ್ಷ್ಮೀ ವಿದ್ಯಾಲಕ್ಷ್ಮೀ ಹೆಸರು ಕೇಳುತ್ತಿದ್ದಂತೆ ಎಲ್ಲರಿಗೂ ಸಂತೋಷವಾಗುತ್ತದೆ

ವಿದ್ಯೆ ಎಂದರೆ "ಸರಸ್ವತೀ", ಲಕ್ಷ್ಮೀ ಎಂದರೆ " ಶ್ರೀ ಮಹಾಲಕ್ಷ್ಮೀ" ಎಂದು ಅರ್ಥ

ಹೆಸರುಬೇಳೆಯನ್ನು ದಾನ ಮಾಡಿದವರಿಗೂ, ತೆಗೆದುಕೊಂಡವರಿಗೂ ಸರಸ್ವತೀ ದೇವಿ ಹಾಗೂ ಶ್ರೀ ಮಹಾಲಕ್ಷ್ಮೀ ದೇವಿಯ ಶಾಶ್ವತ ಅನುಗ್ರಹವಾಗುತ್ತದೆ..

ಹೆಸರುಬೇಳೆ ದಾನದಿಂದ ಸುಖ, ಶಾಂತಿ, ನೆಮ್ಮದಿಯ ವಾತಾವರಣ ಇರುತ್ತದೆ ಮನೆಯಲ್ಲಿ ಒಳಜಗಳಗಳು ನಿವಾರಣೆಯಾಗುತ್ತದೆ

ದೇವಿಗೆ "ಹೆಸರುಬೇಳೆ" ತುಂಬಾ ಇಷ್ಟ, ಇದರಿಂದ ದೇವಿ ಸುಪ್ರಸನ್ನಳಾಗುತ್ತಾಳೆ ಮನೆಯಲ್ಲಿ ಎಲ್ಲರೂ ತುಂಬಾ ವಿದ್ಯಾವಂತರಾಗುತ್ತಾರೆ Gastric, ಗರ್ಭಕೋಶದ ತೊಂದರೆಗಳು ಕಡಿಮೆಯಾಗುತ್ತವೆ

*🙏🏻ಆದರದ ಆಮಂತ್ರಣ🙏🏻**🌸ಗುರುಪೂರ್ಣಿಮ ಮಹೋತ್ಸವ - 2020*ಗುರುಪೂರ್ಣಿಮೆಯಂದು 1000 ಪಟ್ಟು ಹೆಚ್ಚು ಕಾರ್ಯನಿರತ ಗುರುತತ್ವದಿಂದ ಎಲ್ಲರಿಗೂ ಲಾಭವಾಗ...
05/07/2020

*🙏🏻ಆದರದ ಆಮಂತ್ರಣ🙏🏻*

*🌸ಗುರುಪೂರ್ಣಿಮ ಮಹೋತ್ಸವ - 2020*

ಗುರುಪೂರ್ಣಿಮೆಯಂದು 1000 ಪಟ್ಟು ಹೆಚ್ಚು ಕಾರ್ಯನಿರತ ಗುರುತತ್ವದಿಂದ ಎಲ್ಲರಿಗೂ ಲಾಭವಾಗಬೇಕೆಂದು ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಆಯೋಜಿಸಿರುವ

*_ಆನ್ಲೈನ್ ಗುರುಪೂರ್ಣಿಮೆ ಕಾರ್ಯಕ್ರಮ_*

*ನೇರ ಪ್ರಸಾರ ವೀಕ್ಷಿಸಲು*

https://youtu.be/PNvaZ1hyecg

https://www.facebook.com/hjsbengaluru/live/

⏰ *ಸಮಯ:* ಇಂದು ಸಂಜೆ 5 ಗಂಟೆಗೆ

📞 *ಸಂಪರ್ಕ:* 7204082652

gurupurnima

09/11/2019

ಭೂವರಾಹಸ್ವರೂಪಾಯ ನಮೋ ಭೂರಿಪ್ರದಾಯಿನೇ
ನಮೋ ಹಿರಣ್ಯಗರ್ಭಾಯ ರಾಮಾಯಾಪನ್ನಿವಾರಿಣೇ

ಆಚಮನ ಮಂತ್ರದಿಂದಾಗುವ ವೈಜ್ಞಾನಿಕ ಲಾಭ! ಕೇಶವಾಯ ಸ್ವಾಹಾನಾರಾಯಣಾಯ ಸ್ವಾಹಾಮಾಧವಾಯ ಸ್ವಾಹಾಈ ಮೇಲಿನ ಮಂತ್ರವನ್ನು ಜಪಿಸುವಾಗ ಉದ್ದರಣೆಯಿಂದ 3 ಸಲ ...
06/08/2019

ಆಚಮನ ಮಂತ್ರದಿಂದಾಗುವ ವೈಜ್ಞಾನಿಕ ಲಾಭ!

ಕೇಶವಾಯ ಸ್ವಾಹಾ
ನಾರಾಯಣಾಯ ಸ್ವಾಹಾ
ಮಾಧವಾಯ ಸ್ವಾಹಾ

ಈ ಮೇಲಿನ ಮಂತ್ರವನ್ನು ಜಪಿಸುವಾಗ ಉದ್ದರಣೆಯಿಂದ 3 ಸಲ ನೀರನ್ನು ಅಂಗೈಯಲ್ಲಿ ಹಾಕಿ ಕುಡಿಯಲು ಕಾರಣ. ಶಬ್ದವು ಗಂಟಲಿನಿಂದ ಬರುವ ಕಾರಣ ಅಲ್ಲಿರುವ ವಾಯುವು ಹೊರಕ್ಕೆ ಬಂದಾಗ ತೊಂದರೆಯಾಗದಿರಲಿ,ಶಬ್ದವು ಸುಗಮವಾಗಿ ಗಂಟಲಿನಿಂದ ಬರಲಿ ಎಂಬ ಉದ್ದೇಶದಿಂದ ನಮ್ಮ ಋಷಿ ಮುನಿಗಳು ನಮಗೆ ತೋರಿಸಿದ ಸರಳ ಮಾರ್ಗ.

ಕೇಶವಾಯ ಸ್ವಾಹಾ - ಈ ಮಂತ್ರವು ಗಂಟಲಿನಿಂದ ಹೊರಡುತ್ತದೆ. ಹೀಗೆ ಉಚ್ಚರಿಸುವಾಗ ಗಂಟಲಿಗೆ ಸಂಬಂಧಪಟ್ಟ ಸ್ನಾಯು ಮತ್ತು ನರಗಳಿಗೆ ವ್ಯಾಯಾಮ ಕೊಡುವುದೇ ಈ ಮಂತ್ರದ ಉದ್ದೇಶ.

ನಾರಾಯಣಾಯ ಸ್ವಾಹಾ - ಈ ಮಂತ್ರವು ನಾಲಗೆಯ ಸಹಾಯದಿಂದ ಹೊರಡುತ್ತದೆ.ಈ ಮಂತ್ರ ನಾಲಿಗೆಗೆ ಸಂಬಂಧಪಟ್ಟ ನರಗಳಿಗೆ ವ್ಯಾಯಾಮ ಕೊಡುತ್ತದೆ.

ಮಾಧವಾಯ ಸ್ವಾಹಾ - ಈ ಮಂತ್ರವು ತುಟಿಗಳ ಸಹಾಯದಿಂದ ಹೊರಡುತ್ತದೆ.
ಈ ಮೇಲಿನ ಮಂತ್ರಗಳನ್ನು ಅನೇಕ ಸಾರಿ ಉಚ್ಚಾರ ಮಾಡುವುದರಿಂದ, ಗಂಟಲು, ನಾಲಿಗೆ, ತುಟಿಗಳಿಗೆ ಸಂಬಂದಪಟ್ಟ ಸ್ನಾಯುಗಳಿಗೆ ಏಕಕಾಲದಲ್ಲಿ ವ್ಯಾಯಾಮ ಕೊಟ್ಟಂತಾಗುತ್ತದೆ. ಹೀಗೆ ಅನೇಕ ಸಾರಿ ಜಪಿಸುವುದರಿಂದ ಮುಂದೆ ಹೇಳಬೇಕಾದ
ಮಂತ್ರಗಳು ಶುದ್ದವಾಗಿ ಸ್ಪುಟವಾಗಿ ಹೊರಡುತ್ತದೆ. ಶರೀರಶಾಸ್ತ್ರವು ಏನು ಹೇಳುತ್ತದೋ ಅದನ್ನು ಒಂದು ಆಚರಣೆಯಂತೆ ಆಚರಿಸಲು ಧಾರ್ಮಿಕ ಕಾರಣ ಕೊಟ್ಟು ನಮ್ಮ ಹಿಂದಿನ ಋಷಿ ಮುನಿಗಳು ಕಡ್ಡಾಯವಾಗಿ ಮಾಡಲು ತಿಳಿಸಿದ್ದಾರೆ.

ಪೂಜೆಗೆ ಕುಳಿತ ಬ್ರಾಹ್ಮಣರು ಮಂತ್ರ ಮಾಡುವಾಗ ಪದೇ ಪದೇ ಅಂಗೈಯಲ್ಲಿ ನೀರನ್ನು ಹಾಕಿ ಇದೇ ಮಂತ್ರವನ್ನು ಹೇಳುತ್ತಾರೆ.
ಕಾರಣ ಮಂತ್ರವೆಲ್ಲಾ ಸಂಸ್ಕೃತ. ಅದನ್ನು ಉಚ್ಚಾರ ಮಾಡಬೇಕಾದರೆ ನಾಲಗೆ ತುಟಿ ಗಂಟಲಿಗೆ ವ್ಯಾಯಾಮ ಬೇಕು, ಮಂತ್ರ ಗಂಟಲಿನಿಂದ ಸರಿಯಾಗಿ ಹೊರಡಬೇಕಾದರೆ ನೀರು ಗಂಟಲನ್ನು ತಂಪು ಮಾಡುತ್ತಲೇ ಇರಬೇಕು.

ನೀರನ್ನು ಅಂಗೈಯಲ್ಲಿ ಹಾಕಿ ಕುಡಿಯುವ ಕಾರಣ ಅಂಗೈಯಲ್ಲಿ ಇರುವ ವಿದುಚ್ಛಕ್ತಿಯ ಸ್ವಲ್ಪ ಭಾಗ ನೀರಿನಲ್ಲಿ ಬೆರೆಯುತ್ತದೆ, ಆ ನೀರನ್ನು ಕುಡಿದರೆ ಅದು ಹೊಟ್ಟೆಗೆ ಹೋಗಿ ಅಲ್ಲಿರುವ ವಿದ್ಯುತ್ತಿನ ಜೊತೆ ಬೆರೆತು ಶರೀರದಾದ್ಯಂತವೂ ಒಂದೇ ಸಮನೆ ಇರುವಂತೆ ಮಾಡುತ್ತದೆ. ಈ ಕಾರಣದಿಂದ ನೀರನ್ನು ಅಂಗೈಯಲ್ಲಿಯೇ ಹಾಕಿ ಕುಡಿಯಬೇಕು.

ವೈಜ್ಞಾನಿಕ ಕಾರಣಗಳಿಗಿಂತ ಆಧ್ಯಾತ್ಮಿಕ ಲಾಭಕ್ಕಾಗಿ, ಈಶ್ವರಪ್ರಾಪ್ತಿಗಾಗಿ, ಭಾವದಿಂದ ಇಂತಹ ಕೃತಿಗಳನ್ನು ಮಾಡುವುದು ಅತ್ಯಂತ ಶ್ರೇಷ್ಠವಾಗಿದೆ. ಏಕೆಂದರೆ ವ್ಯಾಯಮ ಆಗಲು ಮಂತ್ರಗಳನ್ನೇ ಹೇಳಬೇಕೆಂದಿಲ್ಲ. ಯೋಗಾಸನಗಳನ್ನು ಮಾಡಿದರೂ ಶರೀರದ ವ್ಯಾಯಾಮವಾಗುತ್ತದೆ. ಇಂತಹ ವೈಜ್ಞಾನಿಕ ವಿವರಣೆಗಳಿಂದ ಮನುಷ್ಯನಿಗೆ ಕೇವಲ ಶಾರೀರಿಕ ಲಾಭವಾಗುತ್ತದೆ. ಆಸ್ತಿಕ ಬಂಧುಗಳು ಆಚಮನ ಮಾಡುವಾಗ ಶರೀರಕ್ಕಾಗುವ ವ್ಯಾಯಾಮದ ಕಡೆ ಗಮನ ಕೊಡದೇ, ಕೇಶವ, ನಾರಾಯಣ, ಮಾಧವ ಎಂಬ ನಾಮದಲ್ಲಿರುವ ಭಗವಂತನನ್ನು ಸ್ಮರಿಸಬೇಕು. ಇದರಿಂದಲೇ ನಮ್ಮ ನಿಜವಾದ ಆಧ್ಯಾತ್ಮಿಕ ಉನ್ನತಿಯಾಗಲು ಸಾಧ್ಯ.

10/05/2019

ಗುರು, ಶಿಷ್ಯ
ಒಬ್ಬ ಶಿಷ್ಯನು
ಗುರುವಿನ ಹತ್ತಿರ ನಷ್ಟವಾಗುವ
ಈ ಶರೀರದಲ್ಲಿ ಅತ್ಮ ಹೇಗಿರುತ್ತದೆ ಗುರುವೆ ???
ಎಂದು ಪ್ರಶ್ನಿಸಿದನು..

ಅಗ , ಗುರು ಈ ರೀತಿಯಾಗಿ ವಿವರಿಸಿದರು..

ಹಾಲು ಬಹಳ ಉಪಯೋಗಕ್ಕೆ ಬರುತ್ತವೆ..
ಒಂದು ದಿನಕ್ಕಿಂತ ಹೆಚ್ಚಾದರೆ ಹಾಳಾಗುತ್ತವೆ.

ಹಾಲಿನಲ್ಲಿ ಮಜ್ಜಿಗೆ ಹನಿಗಳು ಹಾಕಿದರೆ ಮೊಸರು ಅಗುತ್ತದೆ...

ಮೊಸರು ಎರಡು ದಿನಕ್ಕೆ
ಉಪಯೋಗ ಅಗುತ್ತದೆ.. ಮೂರನೇ ದಿನ ಹಾಳಾಗುತ್ತದೆ...

ಮೊಸರನ್ನು ಮರ್ಧಿಸಿದರೆ ಬೆಣ್ಣೆ ಸಿಗುತ್ತದೆ..

ಬೆಣ್ಣೆ ಮೂರು ದಿನ ಮಾತ್ರ ಇರುತ್ತದೆ .. ನಾಲ್ಕನೇ ದಿನ ಅದು ಕೂಡ ಹಾಳಾಗುವುದು..

ಆ ಬೆಣ್ಣೆಯನ್ನು ಕಾಯಿಸಿದಾಗ
ತುಪ್ಪ ಆಗುವುದು...

ಈ ತುಪ್ಪ ಎಂದೆಂದಿಗೂ ಹಾಳಾಗುವುದಿಲ್ಲ..

ಒಂದು ದಿನದಲ್ಲಿ ಹಾಳು ಅಗುವ
ಹಾಲಿನಲ್ಲಿ ಎಂದೆಂದಿಗೂ ಹಾಳಾಗದ ತುಪ್ಪ ಅಡಗಿದೆ ...

ಮಾನವ ಶರೀರ ಹಾಲು
ಭಕ್ತಿ ಮಜ್ಜಿಗೆ
ಸೇವೆ ಬೆಣ್ಣೆ
ಸಾಧನೆ ತುಪ್ಪ

ಮಾನವ ಶರೀರವನ್ನು ಸಾಧನೆ ಮಾಡಿ ಕರಗಿಸಿದರೆ
ಅತ್ಮವು ಪವಿತ್ರತೆಯನ್ನು ಹೊಂದುತ್ತದೆ.

គ្រួទាយដ៏ល្បីល្បាញ និងគ្រូបុរាណខាងវិញ្ញាណពីប្រទេសឥណ្ឌា នៅរាជធានីភ្នំពេញសូមកុំអោយបាត់បង់ឱកាស់ ដើម្បីផ្លាស់ប្តូរជីវិតរបស់អ...
25/04/2019

គ្រួទាយដ៏ល្បីល្បាញ និងគ្រូបុរាណខាងវិញ្ញាណពីប្រទេសឥណ្ឌា
នៅរាជធានីភ្នំពេញ
សូមកុំអោយបាត់បង់ឱកាស់ ដើម្បីផ្លាស់ប្តូរជីវិតរបស់អ្នក
‌ទទួលបានការផ្តល់យោបល់ហើយគាត់អាចដោះស្រាយបញ្ហាណាមួយ។
100 % ការធានា
សម្រាប់ការណាត់ជួប
ផ្លូវលេខ 167 ជិតផ្សារទួលទំពូង
ភ្នំពេញ
📲087450467
📲012701832

គ្រួទាយដ៏ល្បីល្បាញ និងគ្រូបុរាណខាងវិញ្ញាណពីប្រទេសឥណ្ឌា នៅរាជធានីភ្នំពេញសូមកុំអោយបាត់បង់ឱកាស់ ដើម្បីផ្លាស់ប្តូរជីវិតរបស់អ...
24/04/2019

គ្រួទាយដ៏ល្បីល្បាញ និងគ្រូបុរាណខាងវិញ្ញាណពីប្រទេសឥណ្ឌា
នៅរាជធានីភ្នំពេញ
សូមកុំអោយបាត់បង់ឱកាស់ ដើម្បីផ្លាស់ប្តូរជីវិតរបស់អ្នក
‌ទទួលបានការផ្តល់យោបល់ហើយគាត់អាចដោះស្រាយបញ្ហាណាមួយ។
100 % ការធានា
សម្រាប់ការណាត់ជួប: 012702832
ផ្លូវលេខ 167 ជិតផ្សារទួលទំពូង
ភ្នំពេញ

Address

Challakere
577522

Alerts

Be the first to know and let us send you an email when Adhyatma posts news and promotions. Your email address will not be used for any other purpose, and you can unsubscribe at any time.

Contact The Business

Send a message to Adhyatma:

Share