08/11/2021
ಮಿತ್ರರೆ,
ಶರೀರ ಸದಾ ಸದೃಢವಾಗಿರುವಂತೆ ಅದರ ಆರೋಗ್ಯ ಕಾಪಾಡಿಕೊಳ್ಳುವುದು ಎಷ್ಟು ಮುಖ್ಯವೋ ಮನಸ್ಸಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅಷ್ಟೇ ಮುಖ್ಯ. ಮನುಷ್ಯ ಶಾರೀರಿಕವಾಗಿ ಹಾಗೂ ಮಾನಸಿಕವಾಗಿ ಪ್ರಫುಲ್ಲಿತನಾದಾಗ, ಜೀವನ ಎಂಬುದು ನೆಮ್ಮದಿ ಹಾಗೂ ಆನಂದಗಳ ನಾವೆಯಾದಂತಾಗುತ್ತದೆ, ಆಗ ಇನ್ನೇನಿದ್ದರೂ ಆ ನಾವೆಯಲ್ಲಿ ಕುಳಿತು ಯಾವ ಕೊರತೆ ಹಾಗೂ ದೂರುಗಳಿಲ್ಲದೆ ನಮ್ಮ ಪ್ರಯಾಣವನ್ನು ಮುಗಿಸುವುದಷ್ಟೆ ಆಗಿದೆ. ಹಾಗಾಗಿ, ಈ ಪಯಣದಲ್ಲಿ ದೇಹದ ಆರೋಗ್ಯ ಕಾಪಾಡಿಕೊಂಡಂತೆ ಮನಸ್ಸಿನ ಆರೋಗ್ಯವನ್ನೂ ವೃದ್ಧಿಸಿ ಕಾಪಾಡಿಕೊಂಡು ಹೋಗಬೇಕಾದ ಅತೀವ ಅಗತ್ಯವಿದೆ. ಕೆಲವರಿಗೆ ಪ್ರೇರಣಾತ್ಮಕ ಕಥೆಗಳಿಂದ ಮನಸ್ಸು ಪುಳಕಿತಗೊಂಡರೆ, ಇನ್ನೂ ಕೆಲವರಿಗೆ ಕುತೂಹಲಕರ ಸಂಗತಿಗಳನ್ನು ಕೇಳಬೇಕೆಂಬ ಆಸೆ, ಹೊಸ ಹೊಸ ಸ್ಥಳಗಳಿಗೆ ಪ್ರವಾಸ ಮಾಡುವ ಹಂಬಲ. ಆಧ್ಯಾತ್ಮಿಕ ವಿಚಾರಗಳಿಂದಲೂ ಪ್ರಭಾವಿತಗೊಳ್ಳುವ ಜನರು ಸಹ ಅನೇಕರಿದ್ದಾರೆ.
ಮೇಲಿನ ಈ ಎಲ್ಲ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಮಾನವ ಕಲ್ಯಾಣವನ್ನೇ ಪ್ರಥಮ ಆದ್ಯತೆಯನ್ನಾಗಿಸಿ ನಾವು ಈಗ, Just Relax Aagi (ಜಸ್ಟ್ ರಿಲ್ಯಾಕ್ಸ್ ಆಗಿ) ಯುಟ್ಯೂಬ್ ವಾಹಿನಿಯನ್ನು ಹೊರತಂದಿದ್ದೇವೆ. ಶಾರೀರಿಕ ಆರೋಗ್ಯದೊಂದಿಗೆ ನೀವು ಮಾನಸಿಕವಾಗಿಯೂ ಉತ್ತಮವಾದ ವಿಚಾರ-ವಿಷಯಗಳನ್ನು ತಿಳಿಯುವ ಮೂಲಕ ಹೆಚ್ಚಿನ ಜ್ಞಾನಾರ್ಜನೆ ಮಾಡಿಕೊಳ್ಳಬೇಕೆಂಬ ಉದ್ದೇಶ ನಮ್ಮದು. ಮುಂದಿನ ದಿನಗಳಲ್ಲಿ ಇದರಲ್ಲಿ ನಮ್ಮ ಸನಾತನದ ಎಲ್ಲ ವಿಷಯ-ವಿಚಾರಗಳನ್ನು ಅಧ್ಯಯನದ ಮೂಲಕ ಸಂಗ್ರಹಿಸಿ ನೀಡಬೇಕೆಂಬ ಉದ್ದೇಶವೂ ಇದೆ. ಇದಕ್ಕಾಗಿಯೇ ಫೇಸ್ ಬುಕ್ ಪುಟವೊಂದನ್ನು ಸಹ ಸೃಷ್ಟಿಸಲಾಗಿದೆ. ಸಾಧ್ಯವಾದಷ್ಟು ಈ ಪುಟದಲ್ಲಿ ನಮ್ಮ ಸನಾತನ ಸಂಸ್ಕೃತಿಯ ಹಲವು ಕುತೂಹಲಕರ ಸಂಗತಿಗಳನ್ನು ಪ್ರಕಟಿಸಲಿದ್ದೇವೆ. ಈ ಚಾನಲ್ ಹಾಗೂ ಪುಟಕ್ಕೆ ಚಂದಾದಾರರಾಗುವ ಮೂಲಕ ನಮ್ಮ ಈ ಪ್ರಾಮಾಣಿಕ ಪ್ರಯತ್ನವನ್ನು ನೀವೆಲ್ಲರೂ ಬೆಂಬಲಿಸಬೇಕೆಂದು ಮನಃ ಪೂರ್ವಕ ಕೇಳಿಕೊಳ್ಳುತ್ತಿದ್ದೇವೆ.
ಯುಟ್ಯೂಬ್ ವಾಹಿನಿ
https://youtube.com/channel/UC5B0e40o2pR9FnaeJElgxUQ
ಫೇಸ್ ಬುಕ್ ಪುಟ್
https://www.facebook.com/Just-Relax-Aagi-108228118335927
ಧನ್ಯವಾದಗಳೊಂದಿಗೆ,
Motivational, Spiritual, Cookery, Humor and Knowledge