29/09/2022
📍ಮಧುಕೇಶ್ವರ ದೇವಸ್ಥಾನ, ಬನವಾಸಿ
ಬನವಾಸಿಯು ಕದಂಬ ರಾಜವಂಶದ ಆಳ್ವಿಕೆಯಲ್ಲಿ ಕರ್ನಾಟಕದ ಮೊದಲ ರಾಜಧಾನಿಯಾಗಿತ್ತು. ಬನವಾಸಿಯ ಮಧುಕೇಶ್ವರ ದೇವಾಲಯದಲ್ಲಿರುವ ಶಿವ ಲಿಂಗವು ಜೇನುತುಪ್ಪದ ಬಣ್ಣವಿರುವ ಕಾರಣ ತನ್ನ ಹೆಸರನ್ನು ಮಧುಕೇಶ್ವರ ಎಂದು ಪಡೆದಿದೆ. ಈ ದೇವಾಲಯವು ಕದಂಬ, ಚಾಲುಕ್ಯ ಹಾಗೂ ಹೊಯ್ಸಳರ ರಾಜ್ಯಾಡಳಿತದಲ್ಲಿ ಹಂತ ಹಂತವಾಗಿ ನವೀಕರಣಗೊಂಡು ನೂತನ ವಾಸ್ತುಶೈಲಿಯನ್ನು ಸೇರ್ಪಡೆ ಮಾಡಲಾಗಿದೆ. ನೃತ್ಯ ಮಂಟಪದಲ್ಲಿರುವ 7 ಅಡಿ ಎತ್ತರವಿರುವ ಏಕಶಿಲಾ ನಂದಿ ಎಡಗಣ್ಣು ಶಿವನನ್ನು ನೋಡುತ್ತಿರುವಂತೆ ಮತ್ತು ಬಲಗಣ್ಣು ಪಾರ್ವತಿಯ ಕಡೆಗೆ ನಿರ್ದೇಶಿಸುವ ರೀತಿಯಲ್ಲಿ ಇದನ್ನು ಕೆತ್ತಲಾಗಿದೆ. ಗಮನಿಸಬೇಕಾದ ವಿಶೇಷ ಅಂಶವೆಂದರೆ ಕಂಬಗಳು ಛೇದಿಸದ ರೀತಿಯಲ್ಲಿ ದೃಷ್ಟಿ ರೇಖೆಯನ್ನು ರಚಿಸಲಾಗಿದೆ. ಆದಿಕವಿ ಪಂಪ ಬನವಾಸಿಯ ಕಣ್ಮನ ಸೆಳೆಯುವ ನಿಸರ್ಗ ಸಂಪತ್ತನ್ನು ವರ್ಣಿಸಿದ್ದಾರೆ, ಇಂತಹ ಪ್ರಾಚೀನ ಪುರಾತನ ಇತಿಹಾಸವಿರುವ ಬನವಾಸಿಯು ನೋಡಲೇ ಬೇಕಾದ ಪ್ರವಾಸಿ ತಾಣವಾಗಿದೆ.
📍Madhukeshwar Temple, Banavaasi
Banavasi was the first capital of Karnataka under the Kadamba dynasty. The Shiva Linga in the Madhukeshwar temple at Banavasi derives its name from Madhukeshwar due to its honey color. This temple was renovated step by step during Kadamba, Chalukya, and Hoysala rules, and new architecture was added. The 7 feet high monolithic Nandi in the Nritya Mantapa is carved with the left eye looking at Shiva and the right eye directed towards Parvati. A special point to note is that the line of sight is created in such a way that the pillars do not intersect. Adikavi Pampa describes the eye-catching natural treasures of Banavasi, with such a rich ancient history, Banavasi is a must-see tourist destination.
Jungle Lodges JLR Incredible India Amrit Mahotsav Anand Singh Kishan Reddy Gangapuram