KoppalTourism

KoppalTourism the land of unbelievable and unexplored

ಕೊಪ್ಪಳ ಅನ್ವೇಷಣೆDISCOVER KOPPALಕೇಂದ್ರ ಪ್ರವಾಸೋದ್ಯಮ ಮಂತ್ರಾಲಯ ಬೆಂಗಳೂರು ಹಾಗೂ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಕೊಪ್ಪಳರವರ ಸಹಯ...
30/01/2026

ಕೊಪ್ಪಳ ಅನ್ವೇಷಣೆ
DISCOVER KOPPAL

ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯ ಬೆಂಗಳೂರು ಹಾಗೂ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಕೊಪ್ಪಳರವರ ಸಹಯೋಗದೊಂದಿಗೆ ಕೊಪ್ಪಳ ಜಿಲ್ಲೆಯ ಪ್ರವಾಸಿ ತಾಣಗಳ ಪರಿಚಯಾತ್ಮಕ ಪ್ರವಾಸ ಕಾರ್ಯಕ್ರಮದ ಸವಿ ನೆನಪುಗಳು

27/01/2026

Discover Koppal Day 3 event

ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯ ಹಾಗೂ ಜಿಲ್ಲಾಡಳಿತ ಕೊಪ್ಪಳ ಸಹಯೋಗದಲ್ಲಿ ಡಿಸ್ಕವರ್ ಕೊಪ್ಪಳ ಕಾರ್ಯಕ್ರಮದ ಭಾಗವಾಗಿ ಪ್ರಸಿದ್ಧ Bloggers, influencers and Tour operator's ತಂಡದೊಂದಿಗೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಹಿರೇಬೆಣಕಲ್ ಗ್ರಾಮದ ವಿಶ್ವವಿಖ್ಯಾತ ಹಾಗೂ 'ಕರ್ನಾಟಕದ ಏಳು ಅದ್ಭುತಗಳಲ್ಲಿ' ಒಂದಾದ ಮೋರೆರ ಬೆಟ್ಟದ (megalithic burial site)  ಕುರಿತು ಅಧ್ಯಯನ ಮಾಡಲಾಯಿತು. ಹಾಗೂ ಕೊಪ್ಪಳ ಜಿಲ್ಲೆಯ ಹೆಮ್ಮೆಯ ಶ್ರೀ ಗವಿಮಠದ ವೈಶಿಷ್ಟ್ಯತೆಯನ್ನು ಆಗಮಿಸಿದ್ದ ತಂಡಕ್ಕೆ ಪರಿಚಯಿಸಲಾಯಿತು.

25/01/2026

You Must visit koppal.

# # #

22/01/2026

Glimpses of Day One.

ಕೊಪ್ಪಳ ಅನ್ವೇಷಣೆ, ಪ್ರವಾಸೋದ್ಯಮ ಪಾಲುದಾರರೊಂದಿಗೆ ಕೊಪ್ಪಳ ಜಿಲ್ಲೆಯ ಪ್ರವಾಸಿ ತಾಣಗಳ ಪರಿಚಯಾತ್ಮಕ ಪ್ರವಾಸ ಕಾರ್ಯಕ್ರಮ
Inauguration session of discover koppal familiarization tour and tourism stakeholders networking session


# tourism

ಆನೆಗುಂದಿಯ ಬಾಳೆ ನಾರಿನ ಕರಕುಶಲ ವಸ್ತುಗಳು (Anegundi Banana Fiber Handicrafts) ಇಂದು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿವೆ. ಗಂಗಾವತಿ ತಾಲ...
15/01/2026

ಆನೆಗುಂದಿಯ ಬಾಳೆ ನಾರಿನ ಕರಕುಶಲ ವಸ್ತುಗಳು (Anegundi Banana Fiber Handicrafts) ಇಂದು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿವೆ. ಗಂಗಾವತಿ ತಾಲ್ಲೂಕಿನ ಆನೆಗುಂದಿಯಲ್ಲಿ ಸ್ಥಳೀಯ ಮಹಿಳೆಯರು ಈ ಕಲೆಯ ಮೂಲಕ ಸ್ವಾವಲಂಬಿಗಳಾಗಿದ್ದಾರೆ.

ಇದರ ಬಗ್ಗೆ ಪ್ರಮುಖ ಮಾಹಿತಿಗಳು ಇಲ್ಲಿವೆ:

ಮಹಿಳೆಯರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಆರಂಭವಾಯಿತು.

ತಯಾರಿಸುವ ವಿಧಾನ: ಬಾಳೆಗಿಡದ ಕಾಂಡದಿಂದ ನಾರನ್ನು ತೆಗೆದು, ಅದನ್ನು ಒಣಗಿಸಿ, ನಂತರ ವಿವಿಧ ವಿನ್ಯಾಸಗಳಲ್ಲಿ ಹೆಣೆಯಲಾಗುತ್ತದೆ. ಇದು ಸಂಪೂರ್ಣವಾಗಿ ಪರಿಸರ ಸ್ನೇಹಿ ಪ್ರಕ್ರಿಯೆಯಾಗಿದೆ.

ಉತ್ಪನ್ನಗಳು: ಇಲ್ಲಿ ಬಾಳೆ ನಾರಿನಿಂದ ಬ್ಯಾಗ್‌ಗಳು (Bags), ಟೋಪಿಗಳು, ಚಾಪೆಗಳು (Mats), ಬುಟ್ಟಿಗಳು, ಮೊಬೈಲ್ ಕೇಸ್‌ಗಳು, ಮತ್ತು ಗೃಹಾಲಂಕಾರದ ವಸ್ತುಗಳನ್ನು ತಯಾರಿಸಲಾಗುತ್ತದೆ.

ವೈಶಿಷ್ಟ್ಯ: ಈ ವಸ್ತುಗಳು ಹೆಚ್ಚು ಕಾಲ ಬಾಳಿಕೆ ಬರುತ್ತವೆ ಮತ್ತು ಇವುಗಳನ್ನು ತಯಾರಿಸಲು ಯಾವುದೇ ರಾಸಾಯನಿಕಗಳನ್ನು ಬಳಸುವುದಿಲ್ಲ. ನೈಸರ್ಗಿಕ ಬಣ್ಣಗಳನ್ನು ಮಾತ್ರ ಬಳಸಲಾಗುತ್ತದೆ.

ಮಾರುಕಟ್ಟೆ: ಈ ಉತ್ಪನ್ನಗಳಿಗೆ ವಿದೇಶಗಳಲ್ಲಿ ಮತ್ತು ಪ್ರವಾಸಿಗರಲ್ಲಿ ಹೆಚ್ಚಿನ ಬೇಡಿಕೆಯಿದೆ. ಆನೆಗುಂದಿಗೆ ಭೇಟಿ ನೀಡುವ ಪ್ರವಾಸಿಗರು ಇವುಗಳನ್ನು ಆಸಕ್ತಿಯಿಂದ ಖರೀದಿಸುತ್ತಾರೆ.

03/11/2025
PLOG RUN FOR WORLD TOURISM DAY- 2025
25/09/2025

PLOG RUN FOR WORLD TOURISM DAY- 2025

WORLD TOURISM DAY- 2025 "PLOG RUN "ANEGUNDI TO ANJANADRIPLEASE JOIN ALL
23/09/2025

WORLD TOURISM DAY- 2025
"PLOG RUN "
ANEGUNDI TO ANJANADRI

PLEASE JOIN ALL

ದಿನಾಂಕ 20.09.2025 ರಂದು ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಕೊಪ್ಪಳ ರವರ ಅಧ್ಯಕ್ಷತೆಯಲ್ಲಿ ಅಂಜನಾದ್ರಿ...
22/09/2025

ದಿನಾಂಕ 20.09.2025 ರಂದು ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಕೊಪ್ಪಳ ರವರ ಅಧ್ಯಕ್ಷತೆಯಲ್ಲಿ ಅಂಜನಾದ್ರಿ ಬೆಟ್ಟದ ಸಮಗ್ರ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆಯು ಅಂಜನಾದ್ರಿ ಬೆಟ್ಟದಲ್ಲಿ ನಡೆಯಿತು.

ಅಂಜನಾದ್ರಿ ಬೆಟ್ಟದ ಹತ್ತಿರ ಪ್ರಗತಿಯಲ್ಲಿರುವ ಪ್ರವಾಸಿ ಮಂದಿರ (ಡಾರ್ಮಿಟರಿ Block ABC ) ಕಾಮಗಾರಿಗಳನ್ನು ವೀಕ್ಷಿಸಿ ಡಿಸೆಂಬರ ತಿಂಗಳಲ್ಲಿ ಹನುಮಮಾಲಾ ಕಾರ್ಯಕ್ರಮ ಇರುವುದರಿಂದ ಪ್ರವಾಸಿಗರು ಹಾಗೂ ಭಕ್ತಾದಿಗಳ ಅನುಕೂಲಕ್ಕಾಗಿ ತ್ವರಿತಗತಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು ಹಾಗೂ ಡಾರ್ಮಿಟರಿ ಬ್ಲಾಕ್ ಗಳಿಗೆ ಅಗತ್ಯವಿರುವ, ವಿದ್ಯುತ್ ಸಂಪರ್ಕ, ಕುಡಿಯುವ ನೀರು, ಸೆಪ್ಟಿಕ್ ಟ್ಯಾಂಕ್, ಬೋರ್ವೆಲ್, ಪಾತ್ ವೇ ಕಾಮಗಾರಿಗಳನ್ನು ಶೀಘ್ರವಾಗಿ ಟೆಂಡರ್ ಕರೆದು ಅನುಷ್ಠಾನಗೊಳಿಸುವಂತೆ ಕೆ.ಟಿ.ಐ.ಎಲ್. ಸಂಸ್ಥೆಯ ಸಹಾಯಕ ಅಭಿಯಂತರರಿಗೆ ಹಾಗೂ ಸೃಷ್ಟಿ ಆರ್ಕಿಟೆಕ್ಟ್ ಮುಖ್ಯಸ್ಥರಾದ ಶ್ರೀಪಾದರ ವರಿಗೆ ತಿಳಿಸಿದರು.

ಪ್ರದಕ್ಷಿಣ ಪಥ ಹಾಗೂ ಥೀಮ್ ಆಧಾರಿತ ಮೆಟ್ಟಿಲುಗಳ ಕಾಮಗಾರಿಗಳಿಗೆ ನಿರಕ್ಷೇಪಣಾ ಪತ್ರ ಪಡೆಯಲು ಎಲ್ಲಾ ಡಾಕ್ಯುಮೆಂಟ್ಗಳನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ರವರು ದಾಖಲೆಗಳನ್ನು ಪರಿಶೀಲಿಸಿದ ನಂತರ Parivesh 2.0 ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಲು ತಿಳಿಸಿದರು.

ಅಂಜನಾದ್ರಿ ಬೆಟ್ಟದ ಮುಖ್ಯರಸ್ತೆಯನ್ನು ಅಗಲೀಕರಣ ಮತ್ತು ವಿದ್ಯುತ್ ಕಂಬಗಳನ್ನು ಅಳವಡಿಸಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಗಂಗಾವತಿ ಇವರಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಶ್ರೀ ಜನಾರ್ದನ ರೆಡ್ಡಿ ಮಾನ್ಯ ಶಾಸಕರು ಗಂಗಾವತಿ ವಿಧಾನಸಭಾ ಕ್ಷೇತ್ರ, ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ ಕೊಪ್ಪಳ, ಮಾನ್ಯ ಸಹಾಯಕ ಆಯುಕ್ತರು , ಆಯುಕ್ತರು ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ,ಕಾರ್ಯದರ್ಶಿಗಳು ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ, ತಹಸೀಲ್ದಾರರು ಗಂಗಾವತಿ, ಸಹಾಯಕ ನಿರ್ದೇಶಕರು ಪುರಾತತ್ವ ಮತ್ತು ವಸ್ತು ಸಂಗ್ರಹಾಲಯ ಪರಂಪರೆ ಇಲಾಖೆ, ವಲಯ ಅರಣ್ಯ ಅಧಿಕಾರಿಗಳು ಗಂಗಾವತಿ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಸೇರಿದಂತೆ ಪ್ರವಾಸೋದ್ಯಮ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

Address

Koppal, KA, India
Koppal
583231

Website

Alerts

Be the first to know and let us send you an email when KoppalTourism posts news and promotions. Your email address will not be used for any other purpose, and you can unsubscribe at any time.

Share