ನಮ್ಮ ಮೂಡಿಗೆರೆ

ನಮ್ಮ ಮೂಡಿಗೆರೆ PAGE ADMIN:
Best home stays and resorts available in near mudigere location if

ಇವತ್ತಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಿಂದ ಅನೇಕ ಜನ ದೇಶದ ಮನೆ ಮಾತಾಗಿದ್ದಾರೆ ಹಾಗೆ ನಮ್ಮ ಮೂಡಿಗೆರೆ ತಾಲ್ಲೂಕಿನ ಊರುಬಗೆ ಗ್ರಾಮ ಪಂಚಾಯಿತಿ ವ್...
24/07/2024

ಇವತ್ತಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಿಂದ ಅನೇಕ ಜನ ದೇಶದ ಮನೆ ಮಾತಾಗಿದ್ದಾರೆ ಹಾಗೆ ನಮ್ಮ ಮೂಡಿಗೆರೆ ತಾಲ್ಲೂಕಿನ ಊರುಬಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಕೆರೆ ಗ್ರಾಮದ ಹುಡುಗ ಕೆಂಚೆ ಗೌಡ ಮತ್ತು ಶಾರದಾ ಅವರ ಮಗ #ವಿಜಿತ್ ಹೊಸಕೆರೆ ಅವರು ವಿದೇಶದಲ್ಲಿ ಕೆಲಸ ಮಾಡುತ್ತಿದ್ದು ತನ್ನ ಬಿಡುವಿನ ಸಮಯದಲ್ಲಿ ಸೋಲೋ ಟ್ರಿಪ್ ಮಾಡಿ ಯೂರೋಪ್ ಖಂಡದ 15 ದೇಶಗಳನ್ನೂ ಸುತ್ತಿದ್ದಾರೆ ಹಾಗೇ ಇನ್ಸ್ಟಾಗ್ರಾಮ್ ಹಾಗು ಯೂಟ್ಯೂಬ್ ಚಾನೆಲ್ ಎಂಬ ಹೆಸರಿನಿಂದ ಖಾತೆ ತೆರೆದು ಕೂತಲ್ಲಿಯೇ ಬೇರೆ ಬೇರೆ ದೇಶ ಅಲ್ಲಿನ ಬದುಕು ಆರ್ಥಿಕ ಸ್ಥಿತಿ ಆವರ ಜೀವನ ಶೈಲಿ ಪರಿಚಯಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. Dr.bro ಎಂಬ ಸಾಮಾನ್ಯ ಹುಡುಗ ಇಂದು ಪ್ರಪಂಚದ ದೊಡ್ಡ ಯುಟ್ಯೂಬರ್ ಆಗಿ ಹೊರೊಮ್ಮಿದು ನಿಮಗೆಲ್ಲ ಗೊತ್ತೇಯಿದೆ ಹಾಗೆ ಈ ಯುವಕನನ್ನು ನಾವು ಸಪೋರ್ಟ್ ಮಾಡುವುದರ ಮೂಲಕ ಪ್ರೋತ್ಸಾಹಿಸಿ ಇನ್ನಷ್ಟು ದೇಶ ಸುತ್ತುವಲ್ಲಿ ಸಹಕರಿಸೋಣ . ಒಂದು ಸಾಮಾನ್ಯ ಮಧ್ಯಮ ವರ್ಗದ ಬಡ ಕುಂಟುಬದಲ್ಲಿ ಹುಟ್ಟಿ ಇಸ್ಟೋದು ದೇಶಗಳನ್ನೂ ಸುತ್ತಿರುವುದು ಇಷ್ಟು ಚಿಕ್ಕ ವಯಸ್ಸಿಗೇ ಸಾಮಾನ್ಯದ ಮಾತಲ್ಲ ಪ್ರೋತ್ಸಾಹ ಸಹಕಾರ ಸಿಕ್ಕರೆ ಇನ್ನಷ್ಟು ಬೆಳೆಯುವ ಶಕ್ತಿ ಅವನಿಗೆ ದೊರೆಯುತ್ತದೆ ಇಂತಹ ಪ್ರತಿಭೆಯನ್ನು ಗುರುತಿಸಿ ಎಲ್ಲೋ ಎಲೆಮಾರಿ ಕಾಯಿಯಾಗಿ ಇರುವ ಇಂತಹ ಪ್ರತಿಭೆಯನ್ನು ಪ್ರದರ್ಶಿಸಲು ನಿಮ್ಮ ಸಹಕಾರ ಅತ್ಯಗತ್ಯ ಹಾಗಾಗಿ ಪ್ರತಿ ದಿನ ಸೋಶಿಯಲ್ ಮೀಡಿಯಾ ದಲ್ಲಿ ನೂರಾರು ಸುದ್ದಿ ಫೋಟೋ ರೀಲ್ಸ್ ಶೇರ್ ಮಾಡುವಾ ನಾವು ಇಂತಹ ನಮ್ಮ ವ್ಯಕ್ತಿಗಳನ್ನು ಫಾಲೋ, ಲೈಕ್, ಶೇರ್ ಮಾಡುವದರ ಮೂಲಕ ಗುರುತಿಸಿ ಪ್ರೋತ್ಸಾಹ ನೀಡಿ ಬೆಳೆಸೋಣ
Plz follow on Instagram:https://www.instagram.com/passenger_kannadiga?igsh=ZGF3dTU2aHF1Nzlm
Plz follow on YouTube:https://m.youtube.com/?si=-U2rrXaHaLcK2FaP&fbclid=PAZXh0bgNhZW0CMTEAAaaSIX8w3oC14SnJzJtUYCifs8vMC61O645nCVvBNMA7aFPc-Y10_36bsdk_aem_T6rzQMXzenW8e-FQJl4YuQ&fbclid=PAZXh0bgNhZW0CMTEAAaaO3cNEHXT-3QVEsmZFONfufVDjHWdTc2oHt1nI0x3Gbpzk6b1wL-P4J7E_aem_ajQCqcBWSdhCYFSzO8fvLg

 #ಬೀದಿಪಾಲದ_ಮಲೆನಾಡ_ಜನಸ್ವರ್ಗದಂತಾ ಮಲೆನಾಡು ಮಳೆಯ ರುದ್ರ ನರ್ತನಕ್ಕೆ ನಲುಗಿ ನರಕವಾಗಿ ಹೋಗಿದೆ ಹಲವಾರು ಸಾವು ನೋವುಗಳು ಸಂಭವಿಸಿವೆ ಜೀವ ಉಳಿದಿ...
11/08/2019

#ಬೀದಿಪಾಲದ_ಮಲೆನಾಡ_ಜನ
ಸ್ವರ್ಗದಂತಾ ಮಲೆನಾಡು ಮಳೆಯ ರುದ್ರ ನರ್ತನಕ್ಕೆ ನಲುಗಿ ನರಕವಾಗಿ ಹೋಗಿದೆ ಹಲವಾರು ಸಾವು ನೋವುಗಳು ಸಂಭವಿಸಿವೆ ಜೀವ ಉಳಿದಿದ್ದರು ಜೀವನಾದರಕ್ಕಿದ ತೋಟ ಗದ್ದೆಗಳು ಕಾಣಸಿಗದಂತೆ ತೊಳೆದು ಹೋಗಿವಿ ಈ ಸಮಯದಲ್ಲಿ ನಾವೆಲ್ಲರೂ ಒಂದಾಗಿ ಮತ್ತೆ ಮಲೆನಾಡನ್ನು ಕಟ್ಟೋಣ ಸಾಧ್ಯವಾದಷ್ಟು ಸಹಾಯ ಹಸ್ತ ಚಾಚಿ ನಮ್ಮ ಜನರನ್ನು ಉಳಿಸೋಣ ಸಾಧ್ಯವಾದಷ್ಟು ಶೇರ್ ಮಾಡಿ

 #ಮತ್ತೆ_ಮಳೆಯಾಗಿದೆಮುಂಗಾರಿನ ಅಭಿಷೇಕದೊಂದಿಗೆ ಮುದಗೊಂಡ ಮಲೆನಾಡು ಹಸುರಿನ ಸೊಬಗನ್ನು ಮೈತುಂಬಿಕೊಂಡ ಮದುವಣಗಿತ್ತಿಯಂತೆ ಶೋಭಿಸುತ್ತಿರುವ ಈ ಸಮಯದ...
25/07/2018

#ಮತ್ತೆ_ಮಳೆಯಾಗಿದೆ

ಮುಂಗಾರಿನ ಅಭಿಷೇಕದೊಂದಿಗೆ ಮುದಗೊಂಡ ಮಲೆನಾಡು ಹಸುರಿನ ಸೊಬಗನ್ನು ಮೈತುಂಬಿಕೊಂಡ ಮದುವಣಗಿತ್ತಿಯಂತೆ ಶೋಭಿಸುತ್ತಿರುವ ಈ ಸಮಯದಲ್ಲಿ ಕವಿವಾಣಿಯು ಮತ್ತಷ್ಟು ಅರ್ಥಪೂರ್ಣವಾಗಿ ತೋರುತ್ತಿದೆ.
ಹೌದು, ಆಷಾಢದ ದಿಡ್ಡಿ ಬಾಗಿಲನ್ನು ತೆರೆದು ಮುಂಗಾರು ಮತ್ತೆ ರೈತರ ಪಾಲಿನ ಭಾಗ್ಯನಿಧಿಯಾಗಿ ಆಗಮಿಸಿದೆ.ಇಂದು ಒದ್ದೆಯಾದ ಬಟ್ಟೆಯೊಂದಿಗೆ ಸಿಡಿಮಿಡಿಗೊಳ್ಳುತ್ತಾ ಮನೆಯೊಳಗೆ ಅಡಿ ಇಡುವ ನಾವು ಮಳೆಯೊಂದಿಗೆ ಬಾಲ್ಯದಲ್ಲಿ ಕಳೆದ ಅಭೂತಪೂರ್ವ ಕ್ಷಣಗಳನ್ನು ಮನಸ್ಸಿಗೆ ಮುದನೀಡುತ್ತಿದ್ದ ಗದ್ದೆ,ಕೆರೆ,ದಂಡೆಗಳ ಸಂಚಾರವನ್ನು ಸಂಗಾತಿಯ ನೆನಪಿಗೆ ಬೆಚ್ಚನೆಯ ಹೊದಿಕೆಯನ್ನು ಹೊದಿಸುತ್ತಿದ್ದ ಪುಳಕವನ್ನು ಅಕ್ಷರಶಃ ಮರೆತಿದ್ದೇವೆ.
ಪಶ್ಚಿಮ ಘಟ್ಟಗಳ ಮಗ್ಗುಲಲ್ಲಿ ಮೈಚಾಚಿಕೊಂಡಿರುವ ಮಲೆನಾಡಿನ ಪುಟ್ಟ ಊರು ಮೂಡಿಗೆರೆ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮಡಿಲ ಕೂಸು. ಇಲ್ಲಿ ಕವಿ ಮನಸಿನ ಕಲಾರಸಿಕರಿಗೆ ಎಣೆ ಇಲ್ಲದಷ್ಟು ಪ್ರಕೃತಿ ಸೌಂದರ್ಯದ ರಸದೌತಣಕ್ಕೇನೂ ಕೊರತೆಯಿಲ್ಲ. ಮುಂಗಾರಿನ ಸಿಂಚನದೊಂದಿಗೆ ಇಲ್ಲಿನ ದೇವರಮನೆ, ಶಿಶಿಲ, ಭೈರವೇಶ್ವರ ಬೆಟ್ಟಗಳು,ಹಸಿರು ಮೈಹೊದ್ದು ಪ್ರವಾಸಿಗರನ್ನೂ ಚಾರಣಿಗರನ್ನೂ ತನ್ನತ್ತ ಸೆಳೆಯುತ್ತಿವೆ.ನಡುವೆಯೇ ಧುಮ್ಮಿಕ್ಕುವ ನೂರಾರು ಜಲಧಾರೆಗಳು ಪ್ರಕೃತಿ ಮಾತೆಯ ಸಿಂಗಾರದೊಡವೆಯಂತೆ ಕಂಗೊಳಿಸುತ್ತಿವೆ. ಪದತಲದಲ್ಲಿ ಭೋರ್ಗರೆದು ಹರಿಯುವ ಹೇಮಾವತಿಯ ನಡಿಗೆ ರಮಣೀಯವಾಗಿದೆ.
ಮಳೆ ಶುರುವಾಯಿತೆಂದರೆ ಸಾಕು ಎಲ್ಲೋ ಅವಿತಿಟ್ಟ ಕೊಡೆಗಳು, ರೈನ್ಕೋಟ್ ಗಳು ಹೊರಬರುತ್ತವೆ. ಬೆಚ್ಚನೆಯ ಬಟ್ಟೆಗಳೊಂದಿಗೆ ಖಾರವಾದ ತಿನಿಸುಗಳಿಗೆ ನಾಲಿಗೆ ಹಪಹಪಿಸತೊಡಗುತ್ತದೆ. ಮಳೆಗಾಲಕ್ಕೆಂದೇ ಮಾಡಿಟ್ಟ ಹಲಸು, ಮರಗೆಣಸಿನ ಹಪ್ಪಳ , ಚಿಪ್ಸ್, ವಿವಿಧ ಬಗೆಯ ಸಂಡಿಗೆಗಳು ಸಂಜೆಯ ಹೊತ್ತಿಗೆ ಕಾಫಿಯ ಗಮ್ಮತ್ತನ್ನು ಇಮ್ಮಡಿಗೊಳಿಸುತ್ತವೆ. ಅದಕ್ಕೂ ಮಿಗಿಲಾಗಿ ವಿಶೇಷವಾಗಿ ಮಳೆಗಾಲದಲ್ಲಿ ತಯಾರಿಸುವ ಹಳ್ಳಿ ಸೊಗಡಿನ ಕಳಲೆ ಪಲ್ಯ, ಅಣಬೆ ಸಾರು, ಕೆಸುವಿನ ಗಂಟು ಜೊತೆಗೆ ನೀರಿನ ಹರಿವಿನೊಂದಿಗೆ ದೊರಕುವ ಹಳ್ಳದ ಮೀನು, ಮಳಲೆ ಮೀನಿನ ಸಾರಿನ ಘಮಕ್ಕೆ ಮನಸೋಲದಿರಲು ಆಗುವುದಿಲ್ಲ. ಸಾಧಾರಣ ಶೀತ ಜ್ವರಕ್ಕೆ ರಾಮಬಾಣದಂತೆ ಪರಿಣಮಿಸುವ ಗದ್ದೆಗಳಲ್ಲಿ ದೊರಕುವ ಹುಲ್ಲು ಏಡಿ ಸಾರಿನ ಸ್ವಾದ , ಬಿಸಿ ಅಕ್ಕಿ ರೊಟ್ಟಿ ಮತ್ತು ತುಪ್ಪದೊಂದಿಗೆ ಸವಿದವರು ಮಾತ್ರ ವರ್ಣಿಸಲು ಸಾಧ್ಯ.ಹಿಂದೆ ಮಳೆಗಾಲದಲ್ಲಿ ಸಂಗ್ರಹಿಸುತ್ತಿದ್ದ ಹಲಸಿನಗಾಳವನ್ನು ಒಲೆಯ ನಿಗಿಕೆಂಡದಲ್ಲಿ ಸುಟ್ಟು ತಿನ್ನುತ್ತಿದ್ದಾಗ ಸಿಗುತ್ತಿದ್ದ ಮಜ ಖಂಡಿತ ಇಂದಿನ ಯಾವ ಕುರುಕಲಿಗೂ ಸಮವಲ್ಲ.ಜೊತೆಯಲ್ಲೆ ತಯಾರಾಗುತ್ತಿದ್ದ ಹಲಸಿನ ಹಣ್ಣಿನ ಕಡುಬು, ದೋಸೆ,ಮುಳುಕ, ಎಲ್ಲವು ಆಧುನಿಕತೆಯೊಂದಿಗೆ ತಮ್ಮ ಘಮವನ್ನು ಕಳೆದುಕೊಂಡವೇನೋ ಎಂದು ಭಾಸವಾಗುತ್ತಿದೆ. ಅದೃಷ್ಟವಶಾತ್ ಹೆಚ್ಚಿನ ಮಲೆನಾಡಿಗರು ಮಳೆಗಾಲದಲ್ಲಿ ಈ ಎಲ್ಲಾ ಖಾದ್ಯಗಳ ಸವಿಯನ್ನು ಇಂದಿಗೂ ಸವಿಯುತ್ತಾ ಮಲೆನಾಡಿನ ಆಹಾರ ಪರಂಪರೆಯನ್ನು ಜೀವಂತವಾಗಿಟ್ಟಿದ್ದಾರೆ.
ಪರಿಸರ ಪ್ರಿಯರು,ಪ್ರವಾಸಿಗರು ಮರೆಯದೇ ಭೇಟಿಕೊಡಬೇಕಾದ ತಮ್ಮ ಪ್ರಯಾಣವನ್ನು ಚಿಕ್ಕಮಗಳೂರಿನ ಸಮೀಪದ ಬಾಬಾ ಬುಡನ್ ಗಿರಿ,ಕಲ್ಲತ್ತಗಿರಿ,ಕೆಮ್ಮಣ್ಣುಗುಂಡಿ,ಯೊಂದಿಗೆ ಕರ್ನಾಟಕದ ಅತಿ ಎತ್ತರದ ಶಿಖರವಾದ ಮುಳ್ಳಯ್ಯನಗಿರಿಯ ರುದ್ರರಮಣೀಯ ಸೊಬಗನ್ನು ಆಸ್ಪಾದಿಸುವುದರೊಂದಿಗೆ ಆರಂಭಿಸಬಹುದು.ಸ್ಫಟಿಕದ ಮಣಿಯಂತೆ ಧಮ್ಮಿಕ್ಕುವ ಮಾಣಿಕ್ಯಧಾರಾ ಜಲಪಾತವೂ ಈ ಭೇಟಿಯ ಭಾಗವಾಗುತ್ತದೆ. ನಂತರ ಹೇಮವತಿಯ ಉಗಮಸ್ಥಾನ ಜಾವಳಿ, ಕಳಸದ ಕಳಸೇಶ್ವರ,ಹೊರನಾಡಿನ ಅನ್ನಪೂರ್ಣೆಶ್ವರಿಯ ದರ್ಶನದೊಂದಿಗೆ, ಶೃಂಗೇರಿಯತ್ತ ಪ್ರಯಾಣ ಬೆಳೆಸಿ ತಾಯಿ ಶಾರದೆಯ ದರ್ಶನದೊಂದಿಗೆ ಋಷ್ಯಶೃಂಗ ದೇವಸ್ಥಾನ ಹಾಗೂ ಸಿರಿಮನೆ ಜಲಪಾತದ ಸೊಬಗನ್ನು ಆಸ್ವಾದಿಸಬಹುದು.
ಅಯ್ಯೋ! ಮಳೆ ಸುರಿಯುತ್ತಾ ಇದೆ ಎಂದು ಗೊಣಗಿಕೊಳ್ಳತ್ತಾ ಮನೆಯೊಳಗೆ ಕೂರುವ ಬದಲು ಮಳೆಗಾಲದಲ್ಲಿ ಅನಾವರಣಗೊಳ್ಳುವ ಪ್ರಕೃತಿ ಸೌಂದರ್ಯ, ಜೀವ ವೈವಿಧ್ಯದ ಸೊಬಗು ಆರೋಗ್ಯದಾಯಕ ಆಹಾರ ಪರಿಚಯ ಎಲ್ಲವನ್ನು ನಮ್ಮ ಮಕ್ಕಳಿಗೆ ಮಾಡಿಸೋಣ. ಕಣ್ಣು ಮುಚ್ಚಿ ಕೂರದೇ ಮಲೆನಾಡಿನ ಸೊಬಗಿನ ಪರಂಪರೆಯನ್ನು ಮುಂದಿನ ಪೀಳಿಗೆ ಕಾಪಿಟ್ಟುಕೊಳ್ಳುವಂತೆ ಮಾಡೋಣ. ಪೂರ್ವಜನ್ಮದ ಸುಕೃತದ ಫಲ ನಾವು ಇಂದು ಮಲೆನಾಡಿಗರು ಈ ಭೂ ಸ್ವರ್ಗವನ್ನು ಪರಿಸರ ಕಾಳಜಿಯೊಂದಿಗೆ ಮತ್ತಷ್ಟು ಸುಂದರವನ್ನಾಗಿಸೋಣ.

 #ಅಕ್ಕಿರೊಟ್ಟಿ_ಹಂದಿತೊಂಡು  #ತಿನ್ನೋ_ಮಾಜನೆ_ಬೇರೆಕೆಲವು ಭಾರತದ ನಾರಿಯರಿಗೆ ನೀವ್ ಪೋರ್ಕ್ ತಿಂತಿರಾ ಅಂದ್ರೆ   " ಥು, ವ್ಯಾ ,ಅಸಹ್ಯ " ಅಂತಾ ಪ...
08/07/2018

#ಅಕ್ಕಿರೊಟ್ಟಿ_ಹಂದಿತೊಂಡು #ತಿನ್ನೋ_ಮಾಜನೆ_ಬೇರೆ

ಕೆಲವು ಭಾರತದ ನಾರಿಯರಿಗೆ ನೀವ್ ಪೋರ್ಕ್ ತಿಂತಿರಾ ಅಂದ್ರೆ " ಥು, ವ್ಯಾ ,ಅಸಹ್ಯ " ಅಂತಾ ಪ್ರಾಣನೆ ಹೋದಂಗ್ ಆಡ್ತಾರೆ, ಅದೇ ಮನೇಲ್ ತಿನ್ವಾಗಾ ಒಂದೆ ಒಂದ್ ಪೀಸು ಕಡಿಮೆ ಬಿದ್ರು ಸಾಕು ಪ್ರಾಣನೆ ಬಿಡ್ತಾರೆ

( ಸಮೀಕ್ಷೆ ಪ್ರಕಾರ )( )

 #ನಮ್ಮ_ಮಲೆನಾಡು  #ನಮ್ಮ_ಹೆಮ್ಮೆಅಬ್ಬಾ.. ಮಳೆಗಾಲ ಶುರುವಾಯಿತೆಂದ್ರೆ ನಮ್ಮ  #ಮಲೆನಾಡಿಗೆ ಹಬ್ಬದ ವಾತಾವರಣ..ಚುಮುಚುಮು ಚಳಿ , ಜೋ ಎಂದು ಒಂದೇ ಸ...
11/06/2018

#ನಮ್ಮ_ಮಲೆನಾಡು #ನಮ್ಮ_ಹೆಮ್ಮೆ

ಅಬ್ಬಾ.. ಮಳೆಗಾಲ ಶುರುವಾಯಿತೆಂದ್ರೆ ನಮ್ಮ #ಮಲೆನಾಡಿಗೆ ಹಬ್ಬದ ವಾತಾವರಣ..ಚುಮುಚುಮು ಚಳಿ , ಜೋ ಎಂದು ಒಂದೇ ಸಮನ ಎಡಬಿಡದೆ ಹುಯ್ಯುವ ಮಳೆಯ ಮದ್ಯ #ಕೆಸ, #ಕಳುಲೆ, #ಬೇರಳುಬು, #ಏಡಿ, #ಹಳ್ಳದ_ಮೀನು ತಿನ್ನುವ ಮಾಜನೆ ಬೇರೆ


 #ಬಂಪರ್‌  #ಬೆಳೆ  #ನಿರೀಕ್ಷೆ ಮೂಡಿಗೆರೆ ತಾಲ್ಲೂಕಿನಲ್ಲಿ ಹತ್ತು ದಿನಗಳ ಹಿಂದೆ ಸುರಿದ ಮಳೆಗೆ ಕಾಫಿ ಗಿಡಗಳಲ್ಲಿ ಮೊಸರು ಚೆಲ್ಲಿದಂತೆ ಹೂವು ಅರಳ...
27/03/2018

#ಬಂಪರ್‌ #ಬೆಳೆ #ನಿರೀಕ್ಷೆ

ಮೂಡಿಗೆರೆ ತಾಲ್ಲೂಕಿನಲ್ಲಿ ಹತ್ತು ದಿನಗಳ ಹಿಂದೆ ಸುರಿದ ಮಳೆಗೆ ಕಾಫಿ ಗಿಡಗಳಲ್ಲಿ ಮೊಸರು ಚೆಲ್ಲಿದಂತೆ ಹೂವು ಅರಳತೊಡಗಿದ್ದು, ಕಾಫಿ ಬೆಳೆಗಾರನ ಮುಖದಲ್ಲಿ ಮಂದಹಾಸ ಮೂಡಿದೆ.
ಬಣಕಲ್‌, ಕೊಟ್ಟಿಗೆಹಾರ, ಬಾಳೂರು, ಮೂಡಿಗೆರೆ, ಕಳಸ ಭಾಗಗಳಲ್ಲಿ ಉತ್ತಮ ಮಳೆ ಸುರಿದಿದ್ದರಿಂದ ಮೂರು ದಿನಗಳಿಂದ ಕಾಫಿ ತೋಟಗಳಲ್ಲಿ ಹೂವಿನ ಚೆಲುವು ನಳನಳಿಸಿದೆ.

ಹೂವಿನ ಮೇಲೆ ಮಳೆ ಸುರಿಯಬಹುದೇನೋ ಎಂಬ ಆತಂಕದಲ್ಲಿದ್ದ ಬೆಳೆಗಾರರಿಗೆ, ಮಳೆರಾಯ ಸ್ಪಂದಿಸಿದ್ದು, ಮೂರ್ನಾಲ್ಕು ದಿನಗಳಿಂದ ಮಳೆ ಕಾಣಿಸಿಕೊಳ್ಳದೆ ಇರುವುದರಿಂದ ಹೂವು ಮಾಗಲು ನೆರವಾಗಿ ಕಾಫಿ ಬೆಳೆಗಾರರ ಹರ್ಷ ಇಮ್ಮಡಿಗೊಳಿಸಿದೆ.

20 ದಿನಗಳಿಂದ ಬೇಸಿಗೆಯ ಬಿಸಿಲು ಹೆಚ್ಚಾಗಿದ್ದರಿಂದ, ರೋಬಸ್ಟಾ ಹಾಗೂ ಅರೇಬಿಕಾ ಕಾಫಿ ಗಿಡಗಳಲ್ಲಿ ಉತ್ತಮವಾಗಿ ಮೊಗ್ಗು ಕಟ್ಟಿದ್ದವು. ಮೊಗ್ಗಿನ ಮೇಲೆ ಬೆಳೆಗಾರರ ನಿರೀಕ್ಷೆಯಂತೆ ಮಳೆ ಸುರಿದಿದ್ದರಿಂದ, ರೋಬಸ್ಟಾ ಹಾಗೂ ಅರೇಬಿಕಾ ಎರಡೂ ತಳಿಗಳಲ್ಲೂ ಉತ್ತಮ ಹೂವಾಗಿದ್ದು, ಬಂಪರ್‌ ಬೆಳೆ ಬರುವ ನಿರೀಕ್ಷೆಯಿದೆ. ಮುಂದಿನ ಎಂಟತ್ತು ದಿನಗಳಲ್ಲಿ ಪನ್ನೀರಿನಂತೆ ಮಳೆ ಸುರಿದರೆ ರೈತರಿಗೆ ವರವಾಗಲಿದೆ.


ಕಾಫಿ ತೋಟಗಳಲ್ಲಿ ದೃಷ್ಟಿ ಹಾಯಿಸಿದಷ್ಟೂ ಬೆಳ್ಳನೆಯ ಹೂಗೊಂಚಲು ಕಂಗೊಳಿಸುತ್ತಿವೆ. ಹೆದ್ದಾರಿಯ ಇಕ್ಕೆಲದಲ್ಲಿರುವ ಕಾಫಿ ತೋಟಗಳಂತೂ ದಾರಿಹೋಕರನ್ನು ತನ್ನತ್ತ ಸೆಳೆಯುತ್ತಿದ್ದು, ಕಾಫಿ ಹೂವಿನ ಪರಿಮಳ ಇಡೀ ಪ್ರದೇಶವನ್ನೇ ವ್ಯಾಪಿಸಿದೆ.

ಕಳೆದ ಬಾರಿ ಪರಿಸರಣ ಮಳೆ ಕೈಕೊಟ್ಟಿದ್ದರಿಂದ ಕಾಫಿ ಹೂವರಳಲು ಅಡ್ಡಿ ಉಂಟಾಗಿ, ವರ್ಷದ ಬೆಳೆಯಲ್ಲಿ ಶೇ 40ಕ್ಕೂ ಅಧಿಕ ಇಳುವರಿ ಕುಂಠಿತವಾಗಿತ್ತು. ಜತೆಗೆ ಬೆಲೆಯ ಏರಿಳಿತದಿಂದಲೂ ಕಾಫಿ ಬೆಳೆಗಾರನಿಗೆ ನಷ್ಟ ಉಂಟಾಗಿದ್ದು, ರೈತರು ವಾರ್ಷಿಕ ವೆಚ್ಚಕ್ಕೆ ಸಾಲ ಮಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಹಣ ಉಳಿತಾಯ: ಉತ್ತಮವಾಗಿ ಮಳೆ ಸುರಿದಿದ್ದರಿಂದ ಈ ಬಾರಿ ಕಾಫಿ ಬೆಳೆಗಾರರಿಗೆ ನೀರು ಹಾಯಿಸುವ ಕೆಲಸ ಉಳಿದಿದೆ. ಇದಕ್ಕೆ ಮಾಡುತ್ತಿದ್ದ ಅಪಾರ ವೆಚ್ಚ ಉಳಿದಂತಾಗಿದೆ.

 #ವರದಾನವಾದ_ಮಳೆ ಹಿಂದು ಮಹಾ ಸಾಗರದಲ್ಲಿಉಂಟಾದ ವಾಯುಭಾರ ಕುಸಿತದಿಂದಾಗಿ ಕಳೆದ ಎರಡು ದಿನಗಳಿಂದ ಕಾಫಿ ಬೆಳೆಯುವ ಪ್ರದೇಶಗಳಾದ ಕೊಡಗು,ಚಿಕ್ಕಮಗಳೂರ...
15/03/2018

#ವರದಾನವಾದ_ಮಳೆ

ಹಿಂದು ಮಹಾ ಸಾಗರದಲ್ಲಿಉಂಟಾದ ವಾಯುಭಾರ ಕುಸಿತದಿಂದಾಗಿ ಕಳೆದ ಎರಡು ದಿನಗಳಿಂದ ಕಾಫಿ ಬೆಳೆಯುವ ಪ್ರದೇಶಗಳಾದ ಕೊಡಗು,ಚಿಕ್ಕಮಗಳೂರು ಜಿಲ್ಲೆಯ ಅನೇಕ ಭಾಗದಲ್ಲಿ ಬಹು ಅಮೂಲ್ಯವಾದ ಮಳೆಯಾಗಿದೆ.

ಕಾಫಿ ಹಾಗು ಕರಿಮೆಣಸು ಸೇರಿದಂತೆ ಅನೇಕ ಬೆಳೆಗಳಿಗೆ ಮಳೆಯ ಅಗತ್ಯವಿತ್ತು.

ಕಾಫಿ ಕುಯ್ಲು ಮುಗಿದ ನಂತರ ಜನವರಿಯಿಂದ ಮಾರ್ಚ್ ಒಳಗಡೆ ಹೂ ಬಿಡುವ ಸಮಯ. ಆದರೆ, ಈ ಅವಧಿಯಲ್ಲಿ ಉತ್ತಮ ಮಳೆ ಅಗತ್ಯವಿದೆ. ಮಳೆ ಇಲ್ಲದಿದ್ದಲ್ಲಿ ಹೂ ಅರಳದೆ ಬಿಸಿಲಿನ ತಾಪಕ್ಕೆ ಅಲ್ಲಿಯೇ ಒಣಗಿ ಹೋಗುತ್ತವೆ. ಇದರಿಂದ ಮುಂದಿನ ವರ್ಷದ ಫಸಲು ಕೈಕೊಡುತ್ತದೆ. ಈಗಾಗಲೇ ಕಾಫಿ ಫಸಲು ಹಾಗೂ ದರ ಪಾತಾಳಮುಖಿಯಾಗಿದ್ದು, ಬೆಳೆಗಾರರು ದಾರಿ ಕಾಣದೆ ಪರಿತಪಿಸುತ್ತಿದ್ದಾರೆ.

ಕಾಫಿ ಹೂ ಅರಳಿಸಲು ಕೆಲವು ಕಡೆ ನೀರಿನ ಸೌಲಭ್ಯ ಇರುವವರು ಕೃತಕ ನೀರಾವರಿಯ ಮೊರೆ ಹೋಗಿದ್ದಾರೆ. ನದಿ ಹಾಗೂ ಕೆರೆಯಿಂದ ನೀರು ಹಾಯಿಸಿದ್ದಾರೆ. ಆದರೆ, ಇನ್ನು ಸಾಕಷ್ಟು ಮಂದಿ ಬೆಳೆಗಾರರು ನೀರಿನ ಸೌಲಭ್ಯ ಇಲ್ಲದೆ ಮಳೆಯನ್ನೇ ಆಶ್ರಯಿಸಿದ್ದಾರೆ. ಇವರು ಪ್ರತಿದಿನ ಆಕಾಶ ನೋಡುತ್ತ ಮಳೆ ನಿರೀಕ್ಷೆಯಲ್ಲಿದ್ದರು .ಅದರಿಂದ ಈ ಪ್ರದೇಶಗಳಲ್ಲಿ ಮಳೆ ದೊಡ್ಡ ವರದಾನವೆಂದೆನಿಸಿದೆ.

ಪ್ರದೇಶಗಳ ಮೇಲೆ ವಿವರ

ಮಡಿಕೇರಿ 1 ಇಂಚು

ವಿರಾಜಪೇಟೆ 70 ಸೆಂಟ್ಸ್

ಪಾಲಿಬೆಟ್ಟ 25 ಸೆಂಟ್ಸ್

ಶನಿವಾರಸಂತೆ 80 ಸೆಂಟ್ಸ್

ಬಾಳೆಹೊನ್ನೂರು ಭಾಗದಲ್ಲಿ 1ಇಂಚು 50ಸೆಂಟ್ಸ್

ಸಕಲೇಶಪುರ 60-70 ಸೆಂಟ್ಸ್

ಬೇಲೂರು-ಅರೇಹಳ್ಳಿ 25 ಸೆಂಟ್ಸ್

ಬಣ್ಕಲ್ ಮೂಡಿಗೆರೆ 50 ಸೆಂಟ್ಸ್

 #ಮಲ್ನಾಡ್_ಬಿಟ್ಟು_ಹೋದೋರಿಗೆ_ಮಾತ್ರ_ಗೊತ್ತು  #ಮಲೆನಾಡಿನ_ಬೆಲೆ....😘😍
15/03/2018

#ಮಲ್ನಾಡ್_ಬಿಟ್ಟು_ಹೋದೋರಿಗೆ_ಮಾತ್ರ_ಗೊತ್ತು
#ಮಲೆನಾಡಿನ_ಬೆಲೆ....😘😍

ಮೂಡಿಗೆರೆಯಲ್ಲಿ ಮೀನುಗಳ ಮಾರಣ ಹೋಮ, ಮೀನಿಗಾಗಿ ವಿಷ ಹಾಕಿರೋ ಶಂಕೆ ಮೂಡಿಗೆರೆ :ಮೂಡಿಗೆರೆ ತಾಲೂಕಿನ ಐತಿಹಾಸಿಕ ಹೇಮಾವತಿ ತೀರದಲ್ಲಿ ಸಾವಿರಾರು ಮೀ...
13/03/2018

ಮೂಡಿಗೆರೆಯಲ್ಲಿ ಮೀನುಗಳ ಮಾರಣ ಹೋಮ, ಮೀನಿಗಾಗಿ ವಿಷ ಹಾಕಿರೋ ಶಂಕೆ


ಮೂಡಿಗೆರೆ :ಮೂಡಿಗೆರೆ ತಾಲೂಕಿನ ಐತಿಹಾಸಿಕ ಹೇಮಾವತಿ ತೀರದಲ್ಲಿ ಸಾವಿರಾರು ಮೀನುಗಳು ಮಾರಣ ಹೋಮ ನಡೆದಿದೆ.ಆದರೆ,ಮತ್ಸ್ಯಗಳ ಈ ಮಾರಣ ಹೋಮಕ್ಕೆ ಕಾರಣವೇನೆಂಬುದು ತಿಳಿದು ಬಂದಿಲ್ಲ. ಆದರೆ, ಮೀನುಗಾರರು ಮೀನನ್ನ ಹಿಡಿಯಲು ವಿಷ ಹಾಕಿರೋ ಶಂಕೆ ವ್ಯಕ್ತವಾಗಿದೆ. ಮೀನುಗಳು ಮಾರಣ ಹೋಮದಿಂದ ಹೇಮಾವತಿ ನದಿ ನೀರು ಕಲುಷಿತಗೊಂಡಿದ್ದು, ಸ್ಥಳಿಯರು ನೀರನ್ನ ಕುಡಿಯೋಕೆ ಹಿಂದೇಟು ಹಾಕ್ತಿದ್ದಾರೆ. ಹೇಮಾವತಿ ನದಿ ಜಾವಳಿ ಸಮೀಪ ಹುಟ್ಟಿ ಮೂಡಿಗೆರೆ ಮೂಲಕ ಹರಿದು ಹಾಸನ ಜಿಲ್ಲೆ ಪ್ರವೇಶಿಸಿ ಗೊರೂರು ಡ್ಯಾಮ್ ಸೇರುತ್ತದೆ. ಈ ಸಂಬಂಧ ಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Address

Mudigere
577132

Alerts

Be the first to know and let us send you an email when ನಮ್ಮ ಮೂಡಿಗೆರೆ posts news and promotions. Your email address will not be used for any other purpose, and you can unsubscribe at any time.

Contact The Business

Send a message to ನಮ್ಮ ಮೂಡಿಗೆರೆ:

Share