
02/07/2025
ಕುಕ್ಕೆ ಸುಬ್ರಹ್ಮಣ್ಯ,ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೈಲಿನಲ್ಲಿ ಹಾಸನ,ದಾವಣಗೆರೆ,ಹಾವೇರಿ,ಹುಬ್ಬಳ್ಳಿ,ಗದಗ,ಬಾಗಲಕೋಟೆ,ವಿಜಯಪುರ ಕಡೆಗೆ ಪ್ರಯಾಣಿಸುವ ಭಕ್ತಾದಿಗಳು ದಯವಿಟ್ಟು ಗಮನಿಸಿ!
ಇಂದಿನಿಂದ ಅಂದರೆ ಜುಲೈ 2, 2025ರಿಂದ ರೈಲು ಸಂಖ್ಯೆ 07378 ಮಂಗಳೂರು ಸೆಂಟ್ರಲ್ – ವಿಜಯಪುರ ಎಕ್ಸ್‌ಪ್ರೆಸ್ ವಿಶೇಷ ರೈಲಿನ ವೇಳಾಪಟ್ಟಿ ಬದಲಾಗಿದೆ.ದಯವಿಟ್ಟು ಹೊಸ ವೇಳಾಪಟ್ಟಿಯನ್ನು ಗಮನಿಸಿ ಹಾಗೂ ನಿಮ್ಮ ಪ್ರಯಾಣವನ್ನು ಕ್ರಮವಾಗಿ ಯೋಜಿಸಿ.
🕰️ರೈಲು ಸಂಖ್ಯೆ 07378 – ಮಂಗಳೂರು ಸೆಂಟ್ರಲ್ – ವಿಜಯಪುರ ಎಕ್ಸ್‌ಪ್ರೆಸ್ ವಿಶೇಷ ರೈಲಿನ ವೇಳಾಪಟ್ಟಿ ಹೀಗೆ ಇದೆ:
(ಅನ್ವಯಕ್ಕೆ ಬರುವ ದಿನಾಂಕ: 02 ಜುಲೈ 2025)
📍 ದಿನ-1
🔸 ಮಂಗಳೂರು ಸೆಂಟ್ರಲ್ – ನಿರ್ಗಮನ: ಸಂಜೆ 4:45
🔸 ಮಂಗಳೂರು ಜಂಕ್ಷನ್ – ಸಂಜೆ 4:57 / 5:00
🔸 ಬಂಟ್ವಾಳ – ಸಂಜೆ 5:30 / 5:32
🔸 ಕಬಕ ಪುತ್ತೂರು – ಸಂಜೆ 6:00 / 6:02
🔸 ಸುಬ್ರಹ್ಮಣ್ಯ ರೋಡ್ – ಸಂಜೆ 6:50 / 7:00
🔸 ಸಕಲೇಶಪುರ – ರಾತ್ರಿ 9:20 / 9:30
🔸 ಹಾಸನ ಜಂಕ್ಷನ್ – ರಾತ್ರಿ 10:20 / 10:30
🔸 ಅರಸೀಕೆರೆ ಜಂಕ್ಷನ್ – ರಾತ್ರಿ 11:20 / 11:22
🔸 ಕಡೂರು – ರಾತ್ರಿ 11:59 / 12:01 (ದಿನ 2)
📍 ದಿನ-2
🔸 ಬಿರೂರು ಜಂಕ್ಷನ್ – ರಾತ್ರಿ 12:08 / 12:09
🔸 ಚಿಕ್ಕಜಾಜೂರು ಜಂಕ್ಷನ್ – 1:10 / 1:12
🔸 ದಾವಣಗೆರೆ – 1:48 / 1:50
🔸 ಹರಿಹರ – 2:03 / 2:05
🔸 ರಾಣಿಬೆನ್ನೂರು – 2:25 / 2:27
🔸 ಬ್ಯಾಡಗಿ – 2:44 / 2:46
🔸 ಎಸ್‌ಎಂಎಂ ಹಾವೇರಿ – 3:00 / 3:02
🔸 ಯಲವಿಗಿ – 3:32 / 3:33
🔸 ಎಸ್‌ಎಸ್‌ಎಸ್ ಹುಬ್ಬಳ್ಳಿ ಜಂಕ್ಷನ್ – ಮುಂಜಾನೆ 4:40 / 4:50
🔸 ಅಣ್ಣಿಗೇರಿ – 5:20 / 5:21
🔸 ಗದಗ ಜಂಕ್ಷನ್ – ಬೆಳಗ್ಗೆ 6:15 / 6:16
🔸 ಮಲ್ಲಾಪುರ – 6:49 / 6:50
🔸 ಹೊಳೆ ಆಲೂರು – 7:07 / 7:08
🔸 ಬಾದಾಮಿ – 7:29 / 7:30
🔸 ಗುಳೇದಗುಡ್ಡ ರೋಡ್ – 7:43 / 7:44
🔸 ಬಾಗಲಕೋಟೆ – 7:56 / 7:58
🔸 ಆಲಮಟ್ಟಿ – 8:37 / 8:38
🔸 ಬಸವನ ಬಾಗೇವಾಡಿ ರೋಡ್ – 8:59 / 9:00
🔹 ವಿಜಯಪುರ – ಆಗಮನ: ಬೆಳಿಗ್ಗೆ 11:15
📌 ಭಾರತೀಯ ರೈಲ್ವೆ ಬೋರ್ಡ್ ಅಧಿಸೂಚನೆ:
*ರೈಲ್ವೆ ಬೋರ್ಡ್ ಈ ರೈಲನ್ನು ಇತ್ತೀಚೆಗೆ ಖಾಯಂಗೊಳಿಸಿದೆ.* ಆದರೆ *ನೈರುತ್ಯ ರೈಲ್ವೆ ವಲಯದಿಂದ ಈ ಬಗ್ಗೆ ಅಧಿಕೃತ ಅಧಿಸೂಚನೆ ಇನ್ನೂ ಬರಬೇಕಿದೆ.* ಆದ್ದರಿಂದ ಖಾಯಂ ಸೇವಾ ಶ್ರೇಣೀಕರಣ ಮತ್ತು ಎಕ್ಸ್‌ಪ್ರೆಸ್ ಟಿಕೇಟು ದರಗಳು ಇನ್ನೂ ಅನ್ವಯವಾಗಿಲ್ಲ.*
🎫 ಆದ್ದರಿಂದ ಸದ್ಯದ ಮಟ್ಟಿಗೆ:
✔️ ಯಾತ್ರಿಕರು ದಯವಿಟ್ಟು ಪ್ರಸ್ತುತ ಇರುವ ದರವನ್ನು ಪರಿಶೀಲಿಸಿ.
✔️ ಕಾಯ್ದಿರಿಸದ ಟಿಕೇಟ್‌ಗಳಿಗೆ ನೀವು UTS , RailOne ಅಪ್ಲಿಕೇಶನ್ಅಥವಾ ನಿಲ್ದಾಣದಲ್ಲಿರುವ ಸ್ವಯಂಚಾಲಿತ ಟಿಕೇಟು ವಿತರಣಾ ಯಂತ್ರದ(ATVM) ಮೂಲಕ ಟಿಕೇಟ್ ಖರೀದಿಸುತ್ತಿದ್ದರೆ, ದಯವಿಟ್ಟು ಸೂಪರ್ ಫಾಸ್ಟ್ ರೈಲು ಎಂದು ಆಯ್ಕೆಮಾಡಿ.
ನೂತನ ವೇಳಾಪಟ್ಟಿಗೆ,ನಿಮ್ಮ ರೈಲು ಎಲ್ಲಿದೆ ಎಂದು ತಿಳಿಯಲು ರೈಲ್ವೆ ಇಲಾಖೆಯ ಅಧಿಕೃತ ಜಾಲತಾಣ,ಅಪ್ಲಿಕೇಶನ್ ಆದ "ಎನ್.ಟಿ.ಇ.ಎಸ್" ಅಥವ "ವೇರ್ ಇಸ್ ಮೈ ಟ್ರೈನ್" ಅಂತಹ ಖಾಸಗಿ ಅಪ್ಲಿಕೇಶನ್ ಅನ್ನು ಬಳಸಿ.